ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
27/04/2025 - 03/05/2025
ವಾರ ಭವಿಷ್ಯ | 2025ರ ಮೇ 4ರಿಂದ 10: ಈ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
Published 3 ಮೇ 2025, 23:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಹೆಚ್ಚು ಆತ್ಮವಿಶ್ವಾಸ ಹೊಂದಿರುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಬಂಧುಗಳೊಂದಿಗೆ ಮಾಡುವ ವ್ಯವಹಾರಗಳಲ್ಲಿ ನಷ್ಟವಿರುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶವಿರುತ್ತದೆ. ಮಕ್ಕಳಿಂದ ನಿಮಗೆ ಸಹಕಾರ ಸಿಗುತ್ತದೆ. ಧರ್ಮ ಕಾರ್ಯಗಳಿಗಾಗಿ ಮನೆಯಲ್ಲಿ ಹಣ ಖರ್ಚಾಗುತ್ತದೆ. ಸಂಗಾತಿಯ ಖರ್ಚು ನಿಮಗೆ ಗಾಬರಿ ಹುಟ್ಟಿಸುತ್ತದೆ. ಅನಿರೀಕ್ಷಿತವಾಗಿ ಕೃಷಿಯಿಂದ ಲಾಭ ಸಿಗಬಹುದು. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಹೆಚ್ಚಾಗಬಹುದು.
ವೃಷಭ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಒಡಹುಟ್ಟಿದವರಿಂದ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಯಾವುದೇ ರೀತಿಯ ಲಾಭವಿರುವುದಿಲ್ಲ. ಸಂಗಾತಿಯ ವ್ಯವಹಾರಗಳಲ್ಲಿ ಹಣ ನಷ್ಟವಾಗಬಹುದು. ಅವಿವಾಹಿತರಿಗೆ ಹಿರಿಯರ ಮೂಲಕ ವಿವಾಹ ಸಂಬಂಧಗಳು ಒದಗುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಪ್ರಗತಿ ಇರುವುದಿಲ್ಲ. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಅವಕಾಶ ದೊರೆಯುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ಮಿಥುನ
ನಿಮ್ಮಲ್ಲಿ ವೃತ್ತಿಪರತೆ ಹೆಚ್ಚಿರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಜನ ಸಮೂಹದ ನಡುವೆ ಮಾತನಾಡುವಾಗ ಎಚ್ಚರವಿರಲಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ನಿಂತಿದ್ದ ವಿದ್ಯಾಭ್ಯಾಸವನ್ನು ಈಗ ಮುಂದುವರಿಸಬಹುದು. ಕೃಷಿಗಾಗಿ ಹೆಚ್ಚು ಬಂಡವಾಳ ಹೂಡುವುದು ಬೇಡ. ಬಂಧುಗಳ ನಡುವೆ ಹಣದ ವ್ಯವಹಾರ ಬೇಡ. ಸಂಗಾತಿಯ ಕಡೆಯ ಹಿರಿಯರಿಗಾಗಿ ಹಣ ಖರ್ಚಾಗುತ್ತದೆ. ಉದ್ಯೋಗದಲ್ಲಿದ್ದ ಕಿರಿಕಿರಿ ಈಗ ಕಡಿಮೆಯಾಗುವ ಸಾಧ್ಯತೆ ಇದೆ.
ಕರ್ಕಾಟಕ
ಮನಸ್ಸಿನಲ್ಲಿ ದೃಢ ನಿರ್ಧಾರಗಳಿರುವುದಿಲ್ಲ. ವೃತ್ತಿಯಲ್ಲಿ ಆದಾಯ ಹೆಚ್ಚುತ್ತದೆ. ಹಿರಿಯ ಮಹಿಳೆಯರಿಂದ ಆಸ್ತಿ ಖರೀದಿಗೆ ಸಹಾಯ ದೊರೆಯುತ್ತದೆ. ಕೃಷಿ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಆದಾಯಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಸಂಗಾತಿಯಿಂದ ಹೆಚ್ಚು ಸಹಕಾರ ದೊರೆಯುತ್ತದೆ. ಹಿರಿಯರ ಜೊತೆಗೂಡಿ ಮಾಡುವ ವ್ಯವಹಾರಗಳಲ್ಲಿ ನಿಮಗೆ ಹೆಚ್ಚು ಲಾಭವಿರುತ್ತದೆ.
ಸಿಂಹ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಮಹಿಳೆಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರಬಹುದು. ಕೃಷಿಯಿಂದ ಲಾಭವಿರುವುದಿಲ್ಲ. ವೃತ್ತಿಪರ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಸ್ಥಾನ ಪಡೆಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿ ನಡೆಸುವ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವಿದೆ. ವೃತ್ತಿಯಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ.
ಕನ್ಯಾ
ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಪಶುಸಂಗೋಪನೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಹಿರಿಯರಿಂದ ಹೆಚ್ಚಿನ ಧನಸಹಾಯವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಹಳೆಯ ಕೀಲು ನೋವುಗಳು ಮತ್ತೆ ಕಾಣಿಸಬಹುದು. ಸಂಗಾತಿ ನಡೆಸುವ ವ್ಯವಹಾರಗಳಲ್ಲಿ ಸ್ವಲ್ಪ ಲಾಭವನ್ನು ಕಾಣಬಹುದು. ವೃತ್ತಿಯಲ್ಲಿ ನಿಮ್ಮ ಜಾಣತನದಿಂದ ಉನ್ನತ ಸ್ಥಾನ ಪಡೆಯಬಹುದು. ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ.
ತುಲಾ
ಆತ್ಮವಿಶ್ವಾಸವು ಬಹಳ ಹೆಚ್ಚಾಗಿರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ಅಡ್ಡಿ ಬರಬಹುದು. ಕೃಷಿಭೂಮಿ ಅಭಿವೃದ್ಧಿಪಡಿಸುವ ಯೋಗವಿದೆ. ವಿದೇಶಿ ವ್ಯವಹಾರ ಮಾಡುವವರು ಬಹಳ ಎಚ್ಚರದಿಂದ ಮಾಡಿರಿ, ಕಾನೂನಿನ ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳು ಸುಗಮವಾಗುತ್ತವೆ. ಪುಸ್ತಕ ವ್ಯಾಪಾರಿಗಳಿಗೆ ನಿರೀಕ್ಷಿತ ವ್ಯವಹಾರ ಇರುವುದಿಲ್ಲ.
ವೃಶ್ಚಿಕ
ಹಿರಿಯರ ನಡುವೆ ಸಂಘರ್ಷ ಬೇಡ. ನಿಮ್ಮ ವಿರುದ್ಧ ಇದ್ದವರೇ ಈಗ ನಿಮ್ಮ ಪರವಾಗಿ ಮಾತನಾಡುವರು. ನವೀನ ರೀತಿಯ ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಲಾಭವಿರುತ್ತದೆ. ಸಂಗಾತಿಯಿಂದ ಸಾಕಷ್ಟು ಧನ ಸಹಾಯವನ್ನು ನಿರೀಕ್ಷೆ ಮಾಡಬಹುದು. ಕಚ್ಚಾ ಅದಿರನ್ನು ತೆಗೆಯುವವರಿಗೆ ಬೇಡಿಕೆ ಬರುತ್ತದೆ. ತಾಯಿಯ ಜೊತೆ ಮುಸುಕಿನ ಗುದ್ದಾಟವಾಗಬಹುದು.
ಧನು
ಸಮಾಜಕ್ಕಾಗಿ ಸಾಕಷ್ಟು ಗೌರವಯುತ ಕೆಲಸಗಳನ್ನು ಮಾಡುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ಶತ್ರುಗಳೇ ನಿಮ್ಮ ಪರವಾಗಿ ನಿಲ್ಲುವರು. ಹಣಕಾಸಿನ ವ್ಯವಹಾರಗಳು ನಷ್ಟಕ್ಕೆ ಕಾರಣವಾಗಬಹುದು. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವನ್ನು ಕಾಣಬಹುದು. ಹೈನುಗಾರಿಕೆಯಲ್ಲಿ ಅಭಿವೃದ್ಧಿ ಇರುವುದಿಲ್ಲ.
ಮಕರ
ವೃತ್ತಿಯಲ್ಲಿ ಒತ್ತಡ ಹೆಚ್ಚಾದರೂ ನಿಭಾಯಿಸಿಕೊಂಡು ಕೆಲಸ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ಬದಲಿ ವ್ಯವಹಾರದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಸರ್ಕಾರಿ ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸ್ಥಾನ ದೊರೆಯುವ ಸಾಧ್ಯತೆಗಳಿವೆ. ಮಕ್ಕಳಿಂದ ನಿಮಗೆ ಗೌರವ ದೊರೆಯುತ್ತದೆ. ರಕ್ತ ಸಂಬಂಧಿ ದೋಷಗಳಿರುವವರು ಹೆಚ್ಚು ಎಚ್ಚರವಹಿಸಿ. ಸಂಸಾರದಲ್ಲಿ ಕಾವೇರಿದ ವಾತಾವರಣವಿರಬಹುದು. ವೃತ್ತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗುತ್ತಾರೆ.
ಕುಂಭ
ಹಿರಿಯರು ಸಾಕಷ್ಟು ಸಮಾಜಮುಖಿಯಾಗಿ ಕೆಲಸ ಮಾಡುವರು. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಸ್ವಂತ ಆಲೋಚನೆಯಿಂದ ಆದಾಯವನ್ನು ವೃದ್ಧಿಸಿಕೊಳ್ಳಬಹುದು. ವಿದೇಶಿ ವ್ಯವಹಾರಗಳಿಂದ ಹೆಚ್ಚು ಲಾಭವನ್ನು ಪಡೆಯಬಹುದು. ಆಸ್ತಿ ಖರೀದಿಗೆ ಹಣ ಹೊಂದಿಸಲು ದಾರಿ ಕಾಣುತ್ತದೆ. ಲೆಕ್ಕತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿ.
ಮೀನ
ವಿದೇಶಿ ವ್ಯಾಮೋಹ ಬಹಳವಾಗಿರುತ್ತದೆ. ಆದಾಯವು ಉತ್ತಮವಾಗಿರುತ್ತದೆ. ನಿಮ್ಮ ಕೆಲವೊಂದು ಕೆಲಸಗಳಿಗೆ ಹಿರಿಯರ ಬೆಂಬಲ ದೊರೆಯುತ್ತದೆ. ವಿದೇಶದಲ್ಲಿ ಇರುವವರಿಗೆ ಸ್ಥಿರಾಸ್ತಿ ಮಾಡುವ ಯೋಗವಿದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮೌನವಾಗಿರುವುದು ಒಳ್ಳೆಯದು. ನೈಸರ್ಗಿಕ ಗೊಬ್ಬರವನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ವೃತ್ತಿಯಲ್ಲಿ ಬುದ್ಧಿವಂತಿಕೆ ಬಳಸಿ ಮುಂದುವರಿಯುವಿರಿ.
ADVERTISEMENT
ADVERTISEMENT