ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
29/09/2024 - 05/10/2024
ವಾರ ಭವಿಷ್ಯ: ಈ ರಾಶಿಯವರಿಗೆ ಆತ್ಮಗೌರವದೊಂದಿಗೆ ಆದಾಯವೂ ವೃದ್ಧಿಸಲಿದೆ
Published 5 ಅಕ್ಟೋಬರ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಹೆಚ್ಚು ವ್ಯಾಯಾಮದ ಕಡೆಗೆ ಗಮನ ಕೊಟ್ಟು ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಪಡುವಿರಿ. ಉತ್ತಮವಾಗಿ ಮಾತನಾಡಿ ಜನರ ಸಂಪರ್ಕಗಳಿಸುವಿರಿ. ಉಪನ್ಯಾಸಕಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆದಾಯವು ಉತ್ತಮವಾಗಿರುತ್ತದೆ. ಬಂಧುಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡುವಿರಿ. ಕೃಷಿಕರಿಗೆ ಹೆಚ್ಚು ಲಾಭವಿರುತ್ತದೆ. ದೇಸಿ ತಳಿಗಳನ್ನು ಅಭಿವೃದ್ಧಿ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳಿರುತ್ತವೆ. ಕಣ್ಣಿನ ತೊಂದರೆ ಮತ್ತು ರಕ್ತ ಪರಿಚಲನೆಯಲ್ಲಿ ತೊಂದರೆ ಇರುವವರು ಎಚ್ಚರವಹಿಸಿರಿ. ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯುವ ಸಾಧ್ಯತೆಗಳಿವೆ.
ವೃಷಭ
ಬಹಳ ಗಾಂಭೀರ್ಯ ಮತ್ತು ಗೌರವ ಯುತ ನಡವಳಿಕೆಯನ್ನು ಹೊಂದುವಿರಿ. ಮಾತು ಸ್ವಲ್ಪ ಒರಟಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿರಿ. ಕೃಷಿಯಿಂದ ಆದಾಯ ವಿರುತ್ತದೆ. ನಿಮ್ಮ ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಂಧುಗಳ ನಡುವೆ ನಿಮಗೆ ಗೌರವ ದೊರೆಯುತ್ತದೆ. ಕುಕ್ಕುಟೋದ್ಯಮವನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಜಲತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಫಲಿತಾಂಶವನ್ನು ಪಡೆಯುವ ಯೋಗವಿದೆ. ಮೂತ್ರ ಸಂಬಂಧಿ ಕಾಯಿಲೆ ಇರುವವರು ಎಚ್ಚರವಹಿಸಿರಿ. ಸಂಗಾತಿಯು ನಿಮ್ಮ ಸಂಪಾದ ನೆಗೆ ಹೆಚ್ಚಿನ ಸಹಕಾರ ನೀಡುವರು. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ.
ಮಿಥುನ
ಕುಸ್ತಿಪಟುಗಳು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಳ್ಳಲುಪ್ರಯತ್ನಪಡಬೇಕು. ಆದಾಯ ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳನ್ನು ಓಲೈಸಿಕೊಂಡು ನಿಮ್ಮ ಕಾರ್ಯಗಳನ್ನು ಸಾಧಿಸುವಿರಿ. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಭೂಮಿ ಒದಗಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರ ಫಲಿತಾಂಶ ಬರುತ್ತದೆ. ಹರಿತವಾದ ಆಯುಧಗಳನ್ನು ಬಳಸುವಾಗ ಎಚ್ಚರವಿರಿ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಅದಿರು ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಹಿರಿಯ ಕೃಷಿಕರಿಂದ ಕೃಷಿಯ ಬಗ್ಗೆ ನಿಮಗೆ ಸೂಕ್ತ ಸಲಹೆ ದೊರೆಯುತ್ತದೆ. ಉದ್ಯೋಗದಲ್ಲಿ ಹಿತ ಶತ್ರುಗಳಿರುತ್ತಾರೆ. ಹೈನುಗಾರಿಕೆಯಿಂದ ಬಹಳ ಲಾಭವಿರುತ್ತದೆ.
ಕರ್ಕಾಟಕ
ಉತ್ತಮ ಮಾತಿನಿಂದ ಎಲ್ಲರನ್ನು ಗೆಲ್ಲುವಿರಿ. ಆದಾಯವು ಸಹ ಉತ್ತಮವಾಗಿರುತ್ತದೆ. ಸರ್ಕಾರಿ ಸಹಾಯಧನಗಳು ಹರಿದು ಬರುತ್ತವೆ. ನಿಮ್ಮ ಧರ್ಮ ಕೆಲಸಗಳಿಗೆ ಹಿರಿಯರ ಸಹಕಾರ ಸಿಗುತ್ತದೆ. ಸಂಸಾರದಲ್ಲಿ ಒಂದು ರೀತಿ ಸಂತೋಷದ ವಾತಾವರಣವಿರುತ್ತದೆ. ಮಕ್ಕಳ ಏಳಿಗೆ ಬಗ್ಗೆ ಸ್ವಲ್ಪಚಿಂತೆ ಕಾಡಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಕಷ್ಟ. ಬಹಳ ದಿನಗಳಿಂದ ನರಳುತ್ತಿರುವವರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಆರೋಗ್ಯಕ್ಕಾಗಿ ಸ್ವಲ್ಪಹಣ ವ್ಯಯವಾಗುತ್ತದೆ. ಸಂಗಾತಿಯ ಜೊತೆ ಕಾವೇರಿದ ಮಾತುಗಳಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಯಶಸ್ಸು ಸಿಗುತ್ತದೆ.
ಸಿಂಹ
ಮನಸ್ಸಿನಲ್ಲಿ ಒಂದು ರೀತಿ ಪ್ರಶಾಂತತೆ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರಬರಬಹುದು. ಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಲಹೆ ಸೂಚನೆಗಳು ದೊರೆಯುತ್ತವೆ. ಕೃಷಿಯಿಂದ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಬಹುದು. ಕೃಷಿ ಉತ್ಪನ್ನಗಳ ಮಧ್ಯಸ್ಥರಾಗಿ ಕೆಲಸ ಮಾಡುವವರಿಗೆ ಹೆಚ್ಚು ಕಮಿಷನ್ ದೊರೆಯುತ್ತದೆ. ಮಕ್ಕಳ ಬಗ್ಗೆ ಉತ್ತಮ ವಾರ್ತೆಗಳು ಕೇಳಿ ಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ಮೂಳೆ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ರಾಜಕಾರಣಿಗಳಿಗೆ ಹೆಚ್ಚು ಜನಸಂಪರ್ಕ ದೊರೆಯುವ ಒಂದು ಸಂದರ್ಭ ಒದಗಿ ಬರುತ್ತದೆ.
ಕನ್ಯಾ
ಆತ್ಮಗೌರವವು ಜಾಸ್ತಿಯಾಗಿರುತ್ತದೆ. ಆದಾಯವು ಸಹ ಏರಿಕೆಯಾಗಿರುತ್ತದೆ. ಉತ್ತಮವಾಗಿ ಮಾತನಾಡಿದಲ್ಲಿ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ನಿಮ್ಮ ನಡವಳಿಕೆ ಮತ್ತು ಕಾರ್ಯಗಳಿಂದ ಉದ್ಯೋಗದಲ್ಲಿ ಹೆಸರು ಪಡೆಯಬಹುದು. ಆಸ್ತಿ ಖರೀದಿ ಮಾಡಲು ಹಿರಿ ಯರಿಂದ ಧನ ಸಹಾಯಗಳು ದೊರೆಯುತ್ತವೆ. ಕೆಲವು ಶತ್ರುಗಳು ತಾವಾಗಿಯೇ ಸುಮ್ಮನಾಗು ವರು. ಕೆಲವರ ವಿದೇಶಕ್ಕೆ ಹೋಗುವ ಕನಸು ಈಗ ನನಸಾಗುವ ಸಾಧ್ಯತೆಗಳಿವೆ. ಹೈನುಗಾರಿಕೆಯಿಂದ ಲಾಭವಿರುತ್ತದೆ. ತಾಯಿಯಿಂದ ಸ್ವಲ್ಪ ನಿಷ್ಟೂರದ ನುಡಿಗಳನ್ನು ಕೇಳಬೇಕಾಗುತ್ತದೆ. ತಂದೆಯಿಂದ ಧನಸಹಕಾರ ಸಿಗುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ.
ತುಲಾ
ಬಹಳ ಸ್ಥಿತಿವಂತರಂತೆ ಕಾಣುವಿರಿ ಆದರೆ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ನಿರೀಕ್ಷಿಸಿದ ಮೂಲಗಳಿಂದ ಸಹಾಯ ದೊರೆ ಯುವುದು ಕಡಿಮೆಯಾಗುತ್ತದೆ. ಭೂಮಿಯ ವ್ಯವಹಾರಗಳಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಅಧ್ಯಯನಶೀಲರಿಗೆ ಅಧ್ಯಯನದಲ್ಲಿ ಹಿನ್ನಡೆ ಯಾಗುವ ಸಾಧ್ಯತೆಗಳಿವೆ. ಕೀಲುಗಳ ನೋವು ಕೆಲವರನ್ನು ಬಾಧಿಸಬಹುದು. ಸಂಗಾತಿಗೆ ಕೃಷಿ ಭೂಮಿ ದೊರೆಯುವ ಯೋಗವಿದೆ. ಹಿರಿಯರು ನಿಮ್ಮನ್ನು ನಿಷ್ಟೂರ ಮಾಡುವ ಸಾಧ್ಯತೆಗಳಿವೆ. ಸ್ನೇಹಿತರ ಜೊತೆ ಸೇರಿ ಗಣಿಗಾರಿಕೆಯನ್ನು ಮಾಡಬೇಕೆನ್ನುವವರಿಗೆ ಅವಕಾಶಗಳು ತೆರೆದು ಕೊಳ್ಳುತ್ತವೆ.ಕೆಲವು ತೆರಿಗೆ ತಜ್ಞರಿಗೆ ವಿದೇಶಕ್ಕೆ ಹೋಗಿ ಬರುವ ಅವಕಾಶವಿರುತ್ತದೆ.
ವೃಶ್ಚಿಕ
ಏನಾದರೂ ಸಾಧಿಸುವ ಛಲವಿರುತ್ತದೆ. ಹಣಕಾಸಿನ ಸ್ಥಿತಿಯು ಮಧ್ಯಮ ಗತಿಯಲ್ಲಿರು ತ್ತದೆ. ಸಂಬಂಧಿಕರಿಗೆ ಸಹಾಯ ಮಾಡುವಾಗ ನ್ಯಾಯ ರೀತಿಯ ಕೆಲಸಗಳಿಗೆ ಮಾತ್ರ ಸಹಾಯ ಮಾಡಿರಿ. ನ್ಯಾಯಾಧೀಶರುಗಳಿಗೆ ಉತ್ತಮ ನ್ಯಾಯ ದಾನ ಮಾಡಿದ ಸಂತೋಷವಿರುತ್ತದೆ. ಆಸ್ತಿ ವಿಚಾರದಲ್ಲಿ ಸದ್ಯಕ್ಕೆ ಮುಂದುವರೆಯು ವುದು ಬೇಡ. ವಿದೇಶದಲ್ಲಿ ಓದಲು ಇಚ್ಚಿಸುವ ವರಿಗೆ ಸೂಕ್ತಾವಕಾಶಗಳು ದೊರೆಯುತ್ತವೆ. ಸಂಗಾತಿ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರ ವಹಿಸಿರಿ. ಸಂಗಾತಿ ಕಡೆಯಿಂದ ನಿಮಗೆ ಧನ ಸಹಾಯ ಆಗಬಹುದು ಹಾಗೂ ಜನ ಸಹಾಯ ಕೂಡ ಆಗುತ್ತದೆ. ಸರ್ಕಾರಿ ಉಪನ್ಯಾಸಕರುಗ ಳಿಗೆ ಅಭಿವೃದ್ಧಿ ಇರುತ್ತದೆ.
ಧನು
ನಿಮ್ಮ ಕೆಲವೊಂದು ಪ್ರಯತ್ನಗಳಿಗೆ ಫಲ ಸಿಗದೆ ಬೇಸರಗೊಳ್ಳುವಿರಿ. ಆದಾಯವು ಕಡಿಮೆ ಇದ್ದರೂ ಸಹ ಅದನ್ನು ಸರಿದೂಗಿಸಲು ಯತ್ನಿಸುವಿರಿ. ಶತ್ರುಗಳನ್ನು ನಿಮ್ಮ ತಂಟೆಗೆ ಬರದಂತೆ ನೋಡಿಕೊಳ್ಳುವಿರಿ. ವಿದೇಶದಲ್ಲಿರು ವವರು ಸ್ವದೇಶದಲ್ಲಿಆಸ್ತಿಮಾಡಿಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಸಂತೋಷವಾದ ವಾರ್ತೆಗ ಳನ್ನು ಕೇಳುವಿರಿ. ಹಣಕಾಸಿನ ವ್ಯವಹಾರ ಮಾಡುವುದು ಅಷ್ಟು ಒಳಿತಲ್ಲ. ಸಂಗಾತಿಗೆ ಇಚ್ಛೆ ಪಟ್ಟ ಆಸ್ತಿ ಕೊಳ್ಳುವ ಯೋಗವಿದೆ. ಸರ್ಕಾರಿ ಉಪನ್ಯಾಸಕರುಗಳಿಗೆ ಅಭಿವೃದ್ಧಿ ಇರುತ್ತದೆ. ಧಾರ್ಮಿಕ ವೃತ್ತಿಯನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಕೆಲವು ವಿಷಯಗಳಿಗೆ ತಾಯಿಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗ ಬಹುದು.
ಮಕರ
ಬಹಳ ಶ್ರಮಪಟ್ಟು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಿರಿ. ನ್ಯಾಯವಾಗಿ ದುಡಿದು ಇದ್ದಿದರಲ್ಲಿ ತೃಪ್ತಿಪಡುವಿರಿ. ಬಂಧುಗಳು ನಿಮಗೆ ಅಡ್ಡಿ ಮಾಡಲು ಹೋಗಿ ಕೆಲವೊಮ್ಮೆ ಅವರೇ ತೊಂದರೆ ಅನುಭವಿಸುವರು. ಇಚ್ಛೆ ಪಟ್ಟ ಆಸ್ತಿ ಯನ್ನುಕೊಳ್ಳಲು ಹೆಚ್ಚಿನಹಣಬೇಕಾಗಬಹುದು. ಸಂಬಂಧಿಕರೊಡನೆ ಯಾವುದೇ ಹಣಕಾಸಿನ ವ್ಯವಹಾರಗಳುಬೇಡ.ಸಂಗಾತಿಯುಒಮ್ಮೊಮ್ಮೆ ನಿಮ್ಮ ಮೇಲೆ ಕೋಪಗೊಳ್ಳುವರು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶಿಕ್ಷಣ ಸಂಸ್ಥೆ ಗಳನ್ನು ನಡೆಸುತ್ತಿರುವವರಿಗೆ ಅಭಿವೃದ್ಧಿ ಇರು ತ್ತದೆ.ಹಾಲಿನ ಉತ್ಪನ್ನಗಳನ್ನು ಮಾರಾಟಮಾಡು ವವರಿಗೆ ಲಾಭವಿರುತ್ತದೆ. ದೈವಾರಾಧನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ.
ಕುಂಭ
ಹಿರಿಯರು ಬಹಳ ನ್ಯಾಯ ತತ್ಪರರಾಗಿ ನಡೆದುಕೊಳ್ಳುವರು. ಉಪನ್ಯಾಸಕಾರರಿಗೆ ವಿದೇಶದಲ್ಲಿ ಉಪನ್ಯಾಸ ಮಾಡುವ ಅವಕಾಶ ದೊರೆಯುತ್ತದೆ. ಮಧ್ಯಮವಯಸ್ಕರು ಮತ್ತು ಯುವಕರು ಮಾತನಾಡುವಾಗ ಎಚ್ಚರಿಕೆಇರಲಿ. ನಿಮ್ಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡಬಹುದು. ಬಂಧುಗಳು ನಿಮ್ಮಿಂದ ಸಹಾಯ ಪಡೆಯಲು ಬರುವರು. ಇಚ್ಚೆ ಪಟ್ಟ ಆಸ್ತಿ ಕೊಳ್ಳುವ ಯೋಗವಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದವರಿಗೆ ಸಾಕಷ್ಟು ಅನುಕೂಲವಿದೆ. ನಿಮ್ಮ ಸಾಲ ತೀರಿಸಲು ಸಂಗಾತಿಯು ಸಹಾಯ ಮಾಡುವರು.ಉದ್ಯೋಗದಲ್ಲಿ ಧನಾಭಿವೃದ್ಧಿ ಆಗುವ ಸಂದರ್ಭವಿದೆ. ಹಿರಿಯರಿಗಾಗಿ ಹಣ ಖರ್ಚು ಮಾಡುವಿರಿ.
ಮೀನ
ಕೆಲವೊಮ್ಮೆ ಅಬ್ರಬುದ್ಧ ನಿರ್ಧಾರಗಳನ್ನು ಕೈಗೊಳ್ಳುವಿರಿ. ಇದು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಾತುಕತೆಗ ಳಲ್ಲಿ ವ್ಯವಹಾರಿಕತೆ ಜಾಸ್ತಿ ಇರುತ್ತದೆ. ಹಿರಿಯರ ಸಹಾಯ ಪಡೆಯಲು ಹಲವಾರು ತಂತ್ರಗಳನ್ನು ಬಳಸುವಿರಿ. ಭೂಮಿಯನ್ನು ಅಭಿವೃದ್ಧಿಪಡಿಸು ವವರಿಗೆ ಉತ್ತಮ ಅವಕಾಶಗಳಿವೆ. ಕೃಷಿಯಿಂದ ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶಗಳು ಸಿಗುವುದು ಕಡಿಮೆ. ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಸಂಗಾತಿಯ ಮುಖೇನ ಕೆಲವು ಕೆಲಸ ಕಾರ್ಯಗಳು ಚುರುಕಾಗಿ ಆಗುವುವು. ಹೈನು ಗಾರಿಕೆ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು.
ADVERTISEMENT
ADVERTISEMENT