ಮುಂಬೈ: ಪ್ರೀಪೇಡ್ ಪಾವತಿಯ ಅವಕಾಶ ಹೊಂದಿರುವವರಿಗೆ ಥರ್ಡ್ ಪಾರ್ಟಿ ಮೊಬೈಲ್ ಅಪ್ಲಿಕೇಷನ್ ಬಳಸಿ ಯುಪಿಐ ಪಾವತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಸಂಪೂರ್ಣ ಕೆವೈಸಿ ಆಗಿರುವ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ (ಪಿಪಿಐ) ಹಣ ಪಡೆಯಲು ಹಾಗೂ ಪಾವತಿ ಮಾಡಲು ಥರ್ಡ್ ಪಾರ್ಟಿ ಮೊಬೈಲ್ ಅಪ್ಲಿಕೇಷನ್ ಬಳಸಬಹುದು ಎಂದು ಬ್ಯಾಂಕ್ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

‘ಈ ಸೌಲಭ್ಯ ಪಡೆಯಲು ಗ್ರಾಹಕರ ಸಂಪೂರ್ಣ ಕೆವೈಸಿ ಆಗಿರಬೇಕು. ಪಿಪಿಐ ಮೂಲಕ ಯುಪಿಐ ವಹಿವಾಟು ನಡೆಸಲು ಗ್ರಾಹಕರು ಸದ್ಯ ಇರುವ ಪಿಪಿಐ ದಾಖಲೆಗಳನ್ನು ದೃಢೀಕರಿಸಬೇಕಿದೆ. ಇಂಥ ಹಣಕಾಸು ವ್ಯವಹಾರಗಳನ್ನು ಯುಪಿಐ ವ್ಯವಸ್ಥೆಗೆ ಹೋಗುವ ಮೊದಲೇ ಅನುಮತಿಸಲಾಗುವುದು’ ಎಂದು ಹೇಳಲಾಗಿದೆ.

ಪಾವತಿ ವ್ಯವಸ್ಥೆ ಪೂರೈಕೆದಾರರಾಗಿ ಪಿಪಿಐ ವಿತರಕರು ಬೇರೆ ಯಾವುದೇ ಬ್ಯಾಂಕ್ ಅಥವಾ ಇತರ ಯಾವುದೇ ಪಿಪಿಐ ಪೂರೈಕೆದಾರರ ಗ್ರಾಹಕರಾಗಿರಬಾರದು. ಗಿಫ್ಟ್ ಕಾರ್ಡ್ಗಳು, ಮೆಟ್ರೊ ರೈಲು ಕಾರ್ಡ್ ಮತ್ತು ಡಿಜಿಟಲ್ ವ್ಯಾಲೆಟ್ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವ ಅವಕಾಶವನ್ನು ಪಿಪಿಐ ಹೊಂದಿರುವವರಿಗೆ ನೀಡುವ ಗುರಿ ಇದೆ ಎಂದು ಆರ್ಬಿಐ ಹೇಳಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ಯುಪಿಐ ಪಾವತಿಯು ಬ್ಯಾಂಕ್ ಖಾತೆಗಳ ನಡುವೆ ನಡೆಯುತ್ತಿದೆ. ಇದಕ್ಕಾಗಿ ಬ್ಯಾಂಕ್ನ ಆ್ಯಪ್ ಅಥವಾ ಇತರ ಥರ್ಡ್ ಪಾರ್ಟಿ ಆ್ಯಪ್ಗಳನ್ನು ಬಳಸಲಾಗುತ್ತಿದೆ. ಇದೀಗ, ಪಿಪಿಐ ಪೂರೈಕೆದಾರರ ಮೂಲಕ ಮೊಬೈಲ್ ಅಪ್ಲಿಕೇಷನ್ ಬಳಸಿ ಯುಪಿಐ ಪಾವತಿ ಮಾಡಬಹುದಾಗಿದೆ.

ಮೊಬೈಲ್ ಫೋನ್ ಬಳಸಿ ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಹಣಕಾಸು ವ್ಯವಹಾರಗಳನ್ನು ನಡೆಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದರಿಂದ ವಸ್ತುಗಳ ಖರೀದಿ ಹಾಗೂ ಇನ್ನಿತರ ಯಾವುದೇ ಸೇವೆಯನ್ನು ಪಡೆಯಲು ಪಿಪಿಐ ಪ್ರಮುಖ ಸಾಧನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.