ಬೇಸಾಯಯಕ್ಕೆ ಸಾಥ್ ನೀಡಿದ ಮಳೆ
ಬಾಗಲಕೋಟೆ: ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಇಲ್ಲಿಯವರೆಗೆ 14 ಸೆ.ಮೀ. ಮಳೆಯಾಗಬೇಕಿತ್ತು. 23 ಸೆ.ಮೀ.ನಷ್ಟು ಮಳೆಯಾಗಿದೆ. ಜೂನ್ ತಿಂಗಳಲ್ಲಿ ಅಲ್ಪ ಕಡಿಮೆಯಾಗಿದ್ದರೂ ಜಿಲ್ಲೆಯಾದ್ಯಂತ ಸುರಿದಿದೆ. ಜೂನ್ ತಿಂಗಳಲ್ಲಿ 7.4 ಸೆ.ಮೀ. ಮಳೆಯಾಗಬೇಕಿತ್ತು. ಇಲ್ಲಿಯವರೆಗೆ ಅಷ್ಟು ಮಳೆ ಸುರಿದಿದೆ. ಬಾದಾಮಿ ತಾಲ್ಲೂಕಿನಲ್ಲಿ 9.5 ಸೆ.ಮೀ ಬಾಗಲಕೋಟೆ ತಾಲ್ಲೂಕಿನಲ್ಲಿ 7.5 ಸೆ.ಮೀ ಬೀಳಗಿ ತಾಲ್ಲೂಕಿನಲ್ಲಿ 5.3 ಸೆ.ಮೀ ಹುನಗುಂದ ತಾಲ್ಲೂಕಿನಲ್ಲಿ 7.7 ಸೆ.ಮೀ ಜಮಖಂಡಿ ತಾಲ್ಲೂಕಿನಲ್ಲಿ 5.5 ಸೆ.ಮೀ ಮುಧೋಳ ತಾಲ್ಲೂಕಿನಲ್ಲಿ 4.3 ಸೆ.ಮೀ ಗುಳೇದಗುಡ್ಡ ತಾಲ್ಲೂಕಿನಲ್ಲಿ 10.7 ಸೆ.ಮೀ ಇಳಕಲ್ ತಾಲ್ಲೂಕಿನಲ್ಲಿ 4 ಸೆ.ಮೀ. ಹಾಗೂ ರಬಕವಿ–ಬನಹಟ್ಟಿ ತಾಲ್ಲೂಕಿನಲ್ಲಿ 6 ಸೆ.ಮೀ ನಷ್ಟು ಮಳೆಯಾಗಿದೆ.