ಹೈದರಾಬಾದ್‌ಗೆ ತೆರಳಬೇಕಿದ್ದ ವಿಮಾನ 8 ಗಂಟೆ ತಡವಾಗಿರುವ ಪ್ರಕಟಣೆ
ಹೈದರಾಬಾದ್ ವಿಮಾನ 8 ಗಂಟೆ ವಿಳಂಬ
ಬೆಂಗಳೂರಿನಿಂದ ಹೈದರಾಬಾದ್‌ಗೆ ಬೆಳಗ್ಗೆ 11.55 ತೆರಳಬೇಕಿದ್ದ ವಿಮಾನ ರಾತ್ರಿ 8 ಗಂಟೆಗೆ ಹೊರಡಲಿದೆ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ತಿಳಿಸಿದರು. ಬೆಳಗ್ಗೆ 11.55ಕ್ಕೆ ಹೊರಡುವ ವಿಮಾನ ಹತ್ತಲು ಬೆಳಗ್ಗೆ 8 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಭದ್ರತಾ ತಪಾಸಣೆ ಮುಗಿಸಿಕೊಂಡು ಬೋರ್ಡಿಂಗ್ ಗೇಟ್‌ನಲ್ಲೇ ಕಾಯುವ ಅನಿವಾರ್ಯತೆ ಉಂಟಾಯಿತು. ಇಷ್ಟು ಸುದೀರ್ಘವಾಗಿ ಕಾಯುವ ಬದಲಿಗೆ ರಸ್ತೆ ಮಾರ್ಗವಾಗಿ ತೆರಳಿದ್ದರೆ ಇಷ್ಟೊತ್ತಿಗಾಗಲೇ ಹೈದರಾಬಾದ್‌ಗೆ ತಲುಪುತ್ತಿದ್ದೇವು ಎಂದು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವುದು, ಸಮಯ ಪರಿಪಾಲನೆಯನ್ನು ಮತ್ತೆ ಹಳಿಗೆ ತರುವುದು ತಕ್ಷಣದ ಗುರಿಯಾಗಿದೆ