ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
‘ವೇದನೆ ನಿವೇದನೆ’
‘ಶತಮಾನಗಳಿಂದ ತಾವು ಅನುಭವಿಸಿದ್ದ ವೇದನೆಗಳನ್ನು ಜನರು ನಿವೇದಿಸಿಕೊಳ್ಳಲು ಆರಂಭಿಸುವ ಮೂಲಕ ದಲಿತ ಮತ್ತು ಬಂಡಾಯ ಸಾಹಿತ್ಯ ರೂಪುಗೊಂಡವು’ ಎಂದು ಬಂಜಗೆರೆ ಜಯಪ್ರಕಾಶ ಅವರು ಹೇಳಿದರು. ‘ಸ್ವಾತಂತ್ರ್ಯ ಮತ್ತು ಸಂವಿಧಾನದ ಮೂಲಕ ಶಿಕ್ಷಣ ಪಡೆದು ಒಂದೆರಡು ದಶಕಗಳ ನಂತರವೇ ದಲಿತರು ಮತ್ತು ಶೋಷಿತರು ತಮ್ಮ ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದರು. ಗಟ್ಟಿಯಾದ ಸಾಹಿತ್ಯ ರೂಪುಗೊಳ್ಳಬೇಕಾದರೆ ಬರೆಯುವವನಲ್ಲಿ ಹೇಳಲು ಗಟ್ಟಿ ವಿಷಯ ಇರಬೇಕು. ಪರಿಣಾಮಕಾರಿಯಾಗಿ ಬರೆಯಲೂ ಬರಬೇಕು’ ಎಂದರು. ‘ಈ ಸಮುದಾಯಗಳ ಬರಹಗಾರರಲ್ಲಿ ಬರೆಯಲು ಸಾಕಷ್ಟು ವಿಷಯ ಇತ್ತು. ಆದರೆ ಅದು ಮೊದಲ ಬರಹವಾದ್ದರಿಂದ ಕೆಲವರು ಮೂದಲಿಸಿದ್ದೂ ಉಂಟು. ಆದರೆ ಒಟ್ಟಾರೆ ಕನ್ನಡ ಸಾಹಿತ್ಯ ವಲಯವು ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಸ್ವೀಕರಿಸಿ ಬೆಳೆಸಿತು’ ಎಂದು ಹೇಳಿದರು.