ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಮ್ಮ ಸೌಭಾಗ್ಯ: ಸದಾಶಿವ ಸ್ವಾಮೀಜಿ

Published 7 ಜನವರಿ 2024, 14:02 IST
Last Updated 7 ಜನವರಿ 2024, 14:02 IST
ಅಕ್ಷರ ಗಾತ್ರ

ಸೇಡಂ: ಅನೇಕ ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಸಮಾರಂಭವನ್ನು ನೋಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕುರಕುಂಟಾ ಗ್ರಾಮದಲ್ಲಿ ಶನಿವಾರ ನಡೆದ ಅಯೋಧ್ಯೆಯ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಮ ಮಂದಿರ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕದ ವಿವಿಧ ಮಠ-ಮಂದಿರಗಳಿಂದ ಸುಮಾರು 15ಕ್ಕೂ ಅಧಿಕ ಮಠಾಧೀಶರು ತೆರಳುತ್ತಿದ್ದು, ಅದರಲ್ಲಿ ನನಗೆ ಅವಕಾಶ ಸಿಕ್ಕಿದ್ದು, ತುಂಬಾ ಸಂತಸ ತಂದಿದೆ. ಇಂತಹ ಅವಕಾಶದ ಸಂದರ್ಭ ನನ್ನ ಜೀವನದಲ್ಲಿ ಎಂದಿಗೂ ಮರೆಯೋದಿಲ್ಲ’ ಎಂದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಜನವರಿ 22 ರಂದು ನೆರವೇರುತ್ತಿದ್ದು, ಇಂತಹ ಐತಿಹಾಸಿಕ ಘಳಿಗೆಯನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾಗಿದೆ’ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಪ್ರವೀಣ ಕುಲಕರ್ಣಿ ಮಾತನಾಡಿದರು.

ರಾಮನ ಭಾವಚಿತ್ರ ಮರವಣಿಗೆ ಕುರಕುಂಟಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲರೆಡ್ಡಿ ಸಂಗ್ಯಂಪಲ್ಲಿ, ವಿಶ್ವನಾಥರೆಡ್ಡಿ ಪಾಟೀಲ ಕುರಕುಂಟಾ, ಮಲ್ಲಿಕಾರ್ಜುನ ಮುಗುಳಿ, ರಾಮಯ್ಯ, ನಾಗಶೆಟ್ಟಿ, ಈರಣ್ಣ ಮಂತಟ್ಟಿ, ಸಂಗಪ್ಪ ಕುಂಬಾರ, ಶರಣಪ್ಪ ಕೊಳ್ಳಿ, ಸೋಮಶೇಖರ ಕೊಳ್ಳಿ, ತುಳಸಿರಾಮ ಪವಾರ, ಸಂತೋಷ ಪೂಜಾರಿ ಪಾಲ್ಗೊಂಡಿದ್ದರು.

ಅನೀಲರೆಡ್ಡಿ  ಸ್ವಾಗತಿಸಿದರು. ಓಂಪ್ರಕಾಶ ಪಾಟೀಲ ತರನಳ್ಳಿ ನಿರೂಪಿಸಿದರು. ನಾಗಪ್ಪ ಕೊಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT