ಮತ್ತೊಬ್ಬ ಆರೋಪಿಗಾಗಿ ಹುಡುಕಾಟ
ಗಂಗಾವತಿ: ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಹೇಳಿದ್ದಾರೆ. ಇದಕ್ಕಾಗಿ ಆರು ತಂಡಗಳನ್ನು ರಚಿಸಲಾಗಿತ್ತು. ‘ಬಂಧಿತ ಆರೋಪಿಗಳು ಹಿಂದೆ ಅಪರಾಧ ಪ್ರಕರಣಗಳಲ್ಲಿ ಬಾಗಿಯಾದ ಇತಿಹಾಸವಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ’ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪೋಲಿಸ್ ಪಾಟೀಲ್ ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಟೆಕ್ಟರ್ ಸೋಮಶೇಖರ ಜುಟ್ಟಲ್ ನಗರಠಾಣೆ ಪಿಐ ಪ್ರಕಾಶ ಮಾಳೆ ಹಾಗೂ ಸಿಬ್ಬಂದಿ ಇದ್ದರು. ‘ಸ್ವಲ್ಪ ಕತ್ತಲಾದರೂ ಓಡಾಡಲು ಹಿಂದೇಟು ಹಾಕುವ ಸ್ಥಳದಲ್ಲಿ ಪ್ರವಾಸಿಗರು ಸ್ಥಳೀಯರ ಹಾಗೂ ಮಧ್ಯವರ್ತಿಗಳ ನೆರವು ಪಡೆದು ಹುಚ್ಚು ಸಾಹಸಗಳನ್ನು ಮಾಡುತ್ತಾರೆ. ನಕ್ಷತ್ರಗಳನ್ನು ನೋಡುವ ನೆಪದಲ್ಲಿ ಬೆಳಗಿನ ಜಾವದ ತನಕವೂ ಸಮಯ ಕಳೆಯುತ್ತಾರೆ. ಆದ್ದರಿಂದ ಇಂಥ ಘಟನೆಗಳು ನಡೆಯುತ್ತಿವೆ’ ಎನ್ನುತ್ತಾರೆ ಸ್ಥಳೀಯರು