ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಛಡ್ಡಾ ತಮ್ಮ ಮಗುವಿಗೆ ‘ನೀರ್’ ಎಂದು ನಾಮಕರಣ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ, ‘ಜಲಸ್ಯ ರೂಪಂ, ಪ್ರೇಮಸ್ಯ ಸ್ವರೂಪಂ - ತತ್ರ ಏವ ನೀರ್’ ಎನ್ನುವ ಸಂಸ್ಕೃತ ಶ್ಲೋಕದ ಮೂಲಕ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ.
.ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ರವೀನಾ ಟಂಡನ್ ಪುತ್ರಿ ರಾಶಾ .
'ನೀರ್’ ಎಂದರೆ; ‘ಶುದ್ಧ, ದೈವಿಕ, ಅಪಾರ’ ಎನ್ನುವುದಾಗಿ ಪದದ ಅರ್ಥವನ್ನೂ ಹಂಚಿಕೊಂಡಿದ್ದಾರೆ. ದಂಪತಿ ತಮ್ಮ ಮಗುವಿನ ಪಾದಕ್ಕೆ ಚುಂಬಿಸುವ ಚಿತ್ರವನ್ನು ಹಂಚಿಕೊಂಡು, ‘ನಮ್ಮ ಹೃದಯ, ಜೀವನದ ಶಾಶ್ವತ ಬಿಂದುವಿನಲ್ಲಿ ನೆಮ್ಮದಿಯನ್ನು ಕಂಡಿದೆ’ ಎಂದು ಬರೆದುಕೊಂಡಿದ್ದಾರೆ.

2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಾಘವ್ ಛಡ್ಡಾ– ಪರಿಣಿತಿ, ಕಳೆದ ಅಕ್ಟೋಬರ್ 19ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಮದುವೆಗೂ ಮುನ್ನ ನಟಿ ಪರಿಣಿತಿ ಚೋಪ್ರಾ, ಹಿಂದಿಯ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.