ನವದೆಹಲಿ: ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅನಿಲ್ ಟಂಡನ್ ಅವರ ಪುತ್ರಿ ರಾಶಾ (20) ಅವರು 'AB4' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಅಭಿಷೇಕ್ ಕಪೂರ್ ನಿರ್ದೇಶನದ "ಆಜಾದ್" ಹಿಂದಿ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟದ್ದ ರಾಶಾ ಟಂಡನ್, ಇದೀಗ ತೆಲುಗು ಚಿತ್ರದಲ್ಲೂ ನಟಿಸುವ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
.PHOTOS | ಕಪ್ಪು ಬಣ್ಣದ ಗೌನ್ನಲ್ಲಿ ಕಂಗೊಳಿಸಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ರಾಶಾ ಟಂಡನ್, ‘ತೆಲುಗು ಚಿತ್ರರಂಗದಲ್ಲಿ ಹೊಸ ಪ್ರಯಾಣ ಆರಂಭಿಸಲು ಉತ್ಸುಕಳಾಗಿದ್ದೇನೆ. ಈ ಸಿನಿಮಾದಲ್ಲಿ ನಟಿಸಲು ನನ್ನನ್ನು ಆಯ್ಕೆ ಮಾಡಿದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ‘ ಎಂದು ಬರೆದುಕೊಂಡಿಕೊಂಡಿದ್ದಾರೆ.

ಅಶ್ವಿನ್ ದತ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ‘ಚಂದಮಾಮ ಕಥಲ್ ಪಿಕ್ಚರ್ಸ್‘ ಬ್ಯಾನರ್ ಅಡಿಯಲ್ಲಿ ಜೆಮಿನಿ ಕಿರಣ್ ನಿರ್ಮಿಸಿದ್ದಾರೆ.

ನಟಿ ರವೀನಾ ಟಂಡನ್ ಬಾಲಿವುಡ್ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ‘ಉಪೇಂದ್ರ’ , ‘ಕೆಜಿಎಫ್ ಚಾಪ್ಟರ್ 2‘ ಚಿತ್ರದಲ್ಲೂ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.