ಈ ಬಾರಿಯ ಬಿಗ್ಬಾಸ್ 12ನೇ ಆವೃತ್ತಿ Expect The Unexpected (ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ) ಎಂಬ ಥೀಮ್ನಲ್ಲಿ ಅತ್ಯಂತ ರೋಚಕವಾಗಿ ಸಾಗುತ್ತಿದೆ. ಇದೀಗ ಬಿಗ್ಬಾಸ್ ಮತ್ತೊಂದು ಅನಿರೀಕ್ಷಿತ ತಿರುವನ್ನು ನೀಡಲು ಸಜ್ಜಾಗಿದೆ. ಅದುವೇ ಮಿಡ್ ಸೀಸನ್ ಫಿನಾಲೆ.

ಹೌದು, ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ. ಈ ಫಿನಾಲೆಯಲ್ಲಿ ಹಲವರ ಎಲಿಮಿನೇಷನ್ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ.
.BBK12: ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ಒಂಟಿ-ಜಂಟಿಗಳ ನಡುವೆ ಜಿದ್ದಾಜಿದ್ದಿ.BBK12: ಕಾಕ್ರೋಚ್ ಬಳಿಕ ಬಿಗ್ಬಾಸ್ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ.
ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ. ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೆ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆಯನ್ನು ನೀಡಲಿದ್ದಾರೆ.

ಮಿಡ್ ಸೀಸನ್ ಫಿನಾಲೆ ಯಾವಾಗ?

ಅಕ್ಟೋಬರ್ 18 ಮತ್ತು 19ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೊ ಹಾಟ್ ಸ್ಟಾರ್ ಪ್ರಸಾರವಾಗಲಿದೆ. ಒಟ್ಟು 6 ಗಂಟೆಗಳ ಕಾಲ ಬಿಗ್ಬಾಸ್ ವೀಕ್ಷಕರಿಗೆ ಸಂಭ್ರಮ ನೀಡಲು ತಂಡ ಸಿದ್ಧವಾಗಿದೆ. ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಅತ್ಯಂತ ಅಪೂರ್ವ ಅಪರೂಪದ ಆಕರ್ಷಕ ಕಾರ್ಯಕ್ರಮವಾಗಿ ಇರಲಿದೆ.

4 ಮಂದಿ ಫೈನಲಿಸ್ಟ್

ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ ಹಾಗೂ ಸ್ಪಂದನಾ ಈ ನಾಲ್ಕು ಮಂದಿ ಮೂರನೇ ವಾರಕ್ಕೆ ಫೈನಲಿಸ್ಟ್ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. ಉಳಿದವರೆಲ್ಲಾ ಈ ವಾರ ನಾಮಿನೇಟ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.