ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ ಆರಂಭಕ್ಕೆ ಎರಡು ದಿನ ಬಾಕಿ ಉಳಿದಿವೆ. ಹೀಗಾಗಿ ವೀಕ್ಷಕರ ಚಿತ್ತ ಬಿಗ್ಬಾಸ್ ನತ್ತ ನೆಟ್ಟಿದೆ. ಜೊತೆಗೆ ಈ ಬಾರಿಯ ಬಿಗ್ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬುವುದು ಭಾನುವಾರದಂದು ಅಧಿಕೃತವಾಗಿ ತಿಳಿಯಲಿದೆ.

ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್ಬಾಸ್ 12ನೇ ಆವೃತ್ತಿ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್ ಆಗಮನವಾಗಲಿದೆ. ಇನ್ನು, ಈ ಬಾರಿ ಬಿಗ್ಬಾಸ್ ತಂಡ ವೀಕ್ಷಕರಿಗೆ ಬಂಗಾರದ ನಾಣ್ಯ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.
.Bigg Boss 12 |ಬಿಗ್ಬಾಸ್ ಆರಂಭಕ್ಕೆ ದಿನಗಣನೆ: ಇಲ್ಲಿದೆ ಕುತೂಹಲಕಾರಿ ಮಾಹಿತಿ.Bigg Boss: ಬಿಗ್ಬಾಸ್ ಮನೆಯಲ್ಲಿ ಮಿಂಚಿ ಮರೆಯಾದ ಸ್ಪರ್ಧಿಗಳಿವರು.
ಚಿನ್ನದ ನಾಣ್ಯವನ್ನು ಗೆಲ್ಲುವುದು ಹೇಗೆ?

ಬಿಗ್ಬಾಸ್ ಮನೆಯೊಳಗೆ ನಡೆಯುವ ವಿಚಾರಗಳನ್ನು ಪ್ರತಿ ಕ್ಷಣವು ಜಿಯೋ ಹಾಟ್ಸ್ಟಾರ್ನಲ್ಲಿ 24ಗಂಟೆ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ವೀಕ್ಷಕರಿಗೆ ಆಡುವ ಮಜಾ ನೀಡುವುದಕ್ಕಾಗಿ ‘ಜೀತೋ ಧನ್ ಧನಾ ಧನ್’ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್ಸ್ಟಾರ್ನಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು. ಫ್ಯಾನ್ ಝೋನ್ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಬಹುದು.

ಬಿಗ್ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡುವ ಅವಕಾಶ

ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ಬಾಸ್ ತಂಡ ಹೊಸ ಸಾಹಸಕ್ಕೆ ಮುಂದಾಗಿದೆ. ಬಿಗ್ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ ಕಲ್ಪಿಸಿದೆ. ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪ್ರೋಮೊವೊಂದನ್ನು ಹಂಚಿಕೊಂಡಿತ್ತು. ಅದರಲ್ಲಿ 'ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ, ಬಿಗ್ಬಾಸ್ ಮನೆಗೆ ಸ್ವಾಗತ' ಎಂದು ಕಿಚ್ಚ ಸುದೀಪ್ ಹೇಳಿದ್ದರು.

‘ಪ್ರೀತಿಯ ಕನ್ನಡಿಗರಿಗೆ ಒಂದು ಅತಿ ದೊಡ್ಡ ಅವಕಾಶ. ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ 10.30ರ ತನಕ ಕಲರ್ಸ್ ಕನ್ನಡ ನೋಡಿ, ಪ್ರತಿ ಧಾರಾವಾಹಿ ಕೊನೆಯಲ್ಲಿ ಕೇಳೋ ಎಲ್ಲ ಪ್ರಶ್ನೆಗೂ ಜಿಯೊ ಹಾಟ್ ಸ್ಟಾರ್ನಲ್ಲಿ ಸರಿಯಾಗಿ ಉತ್ತರಿಸಿ. ಲಕ್ಕಿ ವಿಜೇತರಿಗೆ ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಹೋಗುವ ಸೂಪರ್ ಡೂಪರ್ ಚಾನ್ಸ್' ಎಂದು ಸುದೀಪ್ ಹೇಳಿದ್ದರು. ಸದ್ಯ ಈ ಅವಕಾಶ ಅಂತ್ಯವಾಗಿದ್ದು, ಸೆ. 28ರಂದು ಬಿಗ್ಬಾಸ್ ಮನೆಗೆ ಹೋಗುವ ಅವಾಕಾಶವನ್ನು ಯಾರು ಗಿಟ್ಟಿಸಿಕೊಂಡಿದ್ದಾರೆ ಎಂದು ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.