ಇಂದು ಅಂತರಾಷ್ಟ್ರೀಯ ಅಮ್ಮಂದಿರ ದಿನ. ಪ್ರತಿಯೊಂದು ಕುಟುಂಬ ಅಡಿಪಾಯವೇ ಅಮ್ಮ.ಮನೆ ಮಂದಿಗೋಸ್ಕರ ಏನೆಲ್ಲಾ ಸವಾಲು, ಸಮಸ್ಯೆಗಳಿದ್ದರೂ ಎಲ್ಲವನ್ನೂ ಎದುರಿಸಿ ಅವರಿಗೋಸ್ಕರ ಬದುಕುವ ತಾಯಿಗೆ ಬಿಡುವೆನ್ನುವುದೇ ಇಲ್ಲ. ಮನೆಯವರಿಗೋಸ್ಕರ ದುಡಿಯುತ್ತಿರುವ ಅಮ್ಮನಿಗೆ ಸಂಬಳವಿಲ್ಲ, ರಜೆ ಇಲ್ಲ, ಮನೆಯಲ್ಲಿಯೇ ಇದ್ದು ಇದ್ದು ಕೆಲವೊಮ್ಮೆ ಅಮ್ಮನಿಗೇ ಮಾನಸಿಕ ಆರೋಗ್ಯ ಕಾಡಬಹುದು. ಈ ಬಗ್ಗೆ ಮನೆಯವರು ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮುಳುಗುತ್ತಾರೆ.

ಸ್ವತಃ ಅಮ್ಮನೆ ತನ್ನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ದುಡುಯುತ್ತಲೇ ಇರುತ್ತಾಳೆ. ಕೆಲವೊಮ್ಮೆ ಇದು ತಾಯಿ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಸ್ವತಃ ಅಮ್ಮನೇ ತನ್ನ ಮಾನಸಿಕ ಆರೋಗ್ಯಕ್ಕಾಗಿ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಮನೆಯಲ್ಲಿಯೇ ಇರುವ ತಾಯಂದಿರಿಗೆ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರ ಒಂದಷ್ಟು ಸಲಹೆ ಇಲ್ಲಿದೆ.

ಮನೆಯಲ್ಲೇ ಇದ್ದರೆ ಖಿನ್ನತ ಗ್ಯಾರಂಟಿ
ಹಿಂದೆಲ್ಲಾ ತಾಯಂದಿರುಹೊರಗಡೆ ಕೆಲಸಕ್ಕೆ ಹೋಗುವುದು ತೀರಾ ಕಡಿಮೆ, ಮನೆಯಲ್ಲಿಯೇ ಮನೆಯವರಿಗೋಸ್ಕರ ದುಡಿಯುತ್ತಿದ್ದರು. ಅವರು ಮನೆಯಿಂದ ಹೊರಹೋಗುವುದು ಅಪರೂಪದಲ್ಲಿ ಅಪರೂಪ. ಇದು ಅವರ ಮನಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮನೆಯಲ್ಲಿಯೇ ಇದ್ದು ಅವರ ಮನಸ್ಸು ಹೊರ ಪ್ರಪಂಚಕ್ಕೆ ತೆರೆದುಕೊಂಡಿರುವುದಿಲ್ಲ. ಗಂಡ, ಮಕ್ಕಳು ತಾಯಿಗೆ ಗಮನ ನೀಡದೇ ಹೋದಾಗ ತಾಯಿಯ ಮನಸ್ಸು ನೋವಿಗೆ ಬೀಳುತ್ತದೆ. ಇದು ಖಿನ್ನತೆಗೆ ತಿರುಗಬಹುದು. ಇದು ಮನೆಯವರಿಗೆ ವಿಚಿತ್ರ ಅನುಭವ ನೀಡುತ್ತದೆ. ಹೀಗಾಗಿ ತಾಯಿಯನ್ನೂ ಸಹ ನಮ್ಮಂತೆಯೇ ಹೊರ ಪ್ರಪಂಚಕ್ಕೆ ಹೋಗಲು ಉತ್ತೇಜಿಸುತ್ತಿರಬೇಕು.

ದಿನವನ್ನು ನಿಮ್ಮದಾಗಿಸಿಕೊಳ್ಳಿ
ತಾಯಿಯಾದವರು ಕೇವಲ ಮನೆಯವರ ಜವಾಬ್ದಾರಿ ತೆಗೆದುಕೊಳ್ಳುವುದಷ್ಟೇ ಅಲ್ಲ, ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳಿ, ನಿಮ್ಮನ್ನು ನೀವು ಆಕರ್ಷಕವಾಗಿ ಇಟ್ಟುಕೊಳ್ಳುವತ್ತ ಗಮನ ನೀಡಿ. ಮನೆಯಾರು ನೋಡಬೇಕು ಎಂಬ ಮನಸ್ಥಿತಿಯಿಂದ ಹೊರ ಬನ್ನಿ, ಪ್ರತಿನಿತ್ಯ ಸ್ನಾನ ಮಾಡಿ, ಮೇಕಪ್ ಧರಿಸಿ, ಬೆಳಗ್ಗೆ ಅಥವಾ ಸಂಜೆ ಹೊರಗಡೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಆನಂದ ನೀಡುವ ಜೊತೆಗೆ ಸಮಾಜದೊಂದಿಗೆ ಬೆರೆಯಲು ಅವಕಾಶ ನೀಡುತ್ತದೆ.

ನಿಮಗಾಗಿ ಸಮಯ ಮಾಡಿಕೊಳ್ಳಿ

ತಾಯಿಯಾದವಳಿಗೆ ಮನೆಯವರನ್ನು ನೋಡಿಕೊಳ್ಳುವ ಭರದಲ್ಲಿ ತನ್ನನ್ನೂ ಸಹ ನೋಡಿಕೊಳ್ಳಬೇಕು ಎನ್ನುವುದು ಮರೆತೇ ಹೋಗಿರುತ್ತದೆ. ಈ ತಪ್ಪನ್ನು ಮಾಡದಿರಿ. ಮನೆಯವರಿಗೆ ನೀಡದಷ್ಟೇ ಆದ್ಯತೆ ನಿಮಗೂ ನೀಡಿಕೊಳ್ಳಿ. ನಿಮಗಾಗಿ ವಿಶೇಷ ಸಮಯ ಮಾಡಿಕೊಳ್ಳಿ. ನಿಮ್ಮ ಆರೈಕೆಗೆ ಸಮಯ ಮಾಡಿಕೊಳ್ಳಿ. ಹೆಣ್ಣು ಮಕ್ಕಳು ಮಗುವಾದ ಮೇಲೆ ದಪ್ಪ ಆಗುವುದು, ಒಳ್ಳೆಯದ ಬಟ್ಟೆ ಧರಿಸದೇ ಇದ್ದು ಬಿಡುವುದು ಮಾಡುತ್ತಾರೆ. ಇದರಿಂದ ತಮ್ಮ ದೈಹಿಕ ಆಕಾರ ಬದಲಾಗುವ ಜೊತೆಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲು ಅವರೇ ಕಾರಣರಾಗುತ್ತಾರೆ. ಹೀಗಾಗಿ ಮೊದಲು ನಿಮ್ಮ ಆರೈಕೆಗೆ ಆದ್ಯತೆ ನೀಡಿ. ಸಾಧ್ಯವಾದರೆ ಜಿಮ್ ಅಥವಾ ಯೋಗದಂಥ ವ್ಯಾಯಮ ಕೇಂದ್ರಗಳಿಗೆ ಸೇರಿಕೊಳ್ಳಿ. ಇಡೀ ಮನೆಯನ್ನು ನೀವೋಬ್ಬರೇ ಸುಚಿಗೊಳಿಸಬೇಕೆಂದೇನಿಲ್ಲ. ನಿಮ್ಮ ಮಕ್ಕಳು ಅಥವಾ ಗಂಡನ ಸಹಾಯ ಪಡೆದುಕೊಳ್ಳಬಹುದು. ಇಲ್ಲವೇ ಕೆಲಸಕ್ಕೆ ಜನ ಇಟ್ಟುಕೊಳ್ಳುವುದು ನಿಮಗೆ ನೀವು ಸಮಯ ಕೊಡಲು ಸಾಧ್ಯತೆ ಮಾಡಿಕೊಡುತ್ತದೆ.
- ನಿಮ್ಮನ್ನು ನೀವು ಹೈಡ್ರೇಟ್ ಆಗಿರಿಸಲು ಸಾಕಷ್ಟು ನೀರು ಕುಡಿಯಿರಿ.
- ಆರೋಗ್ಯದ ದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಅಭ್ಯಾಸ ಮಾಡಿರಿ.
_ ಸ್ನೇಹಿತರೊಂದಿಗೆ ಕಾಲ ಕಳೆಯಿರಿ.
_ಶಾಪಿಂಗ್ಗೆ ತೆರಳುತ್ತಿರಿ

ಹವ್ಯಾಸವನ್ನು ಹುಡುಕಿಕೊಳ್ಳಿ
ಕೆಲ ತಾಯಂದಿರಿಗೆ ತಮ್ಮನ್ನು ಆಕ್ವಿವ್ ಆಗಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ನಿಮಗೆ ಖುಷಿ ನೀಡುವ ಹವ್ಯಾಸಗಳ ಪಟ್ಟಿ ಮಾಡಿ. ನಿಮ್ಮ ಸಮಯಕ್ಕೆ ಹೊಂದಿಕೊಳ್ಳುವ ಹಾಗೂ ನಿಮಗೆ ಇಷ್ಟವೆನಿಸುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಹೆಚ್ಚು ಸಹಕಾರಿ. ನೀವು ಏಕಾಂಗಿ ಎನ್ನುವ ಭಾವನೆಯನ್ನು ತೊಡೆದು ಹಾಕುತ್ತದೆ.

ಮನೆಯಲ್ಲೇ ಮಾಡುವ ಕೆಲಸ ಹುಡುಕಿ

ತಾಯಂದಿರಿಗೆ ಹೊರ ಹೋಗಿ ದುಡಿಯಲು ಕಷ್ಟವಾಗಬಹುದು ಅಥವಾ ಮನೆಯವರ ಒತ್ತಡದಿಂದ ಕಚೇರಿಗೆ ಹೋಗಲು ಆಗದಿರಬಹುದು. ಹಾಗೆಂದ ಮಾತ್ರಕ್ಕೆ ಮನೆಯಲ್ಲಿ ಕೇವಲ ಮನೆ ಕೆಲಸ ಮಾಡಿಕೊಂಡೇ ಇರಬೇಕೆಂದೇನಿಲ್ಲ. ಇಂದಿನ ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವ ಎಷ್ಟೋ ಅವಕಾಶಗಳಿವೆ. ನೀವು ಸಹ ವಿದ್ಯಾವಂತರಾಗಿರುವುದರಿಂದ ನಿಮ್ಮ ವಿದ್ಯೆಯನ್ನು ಇಂಥ ಕೆಲಸ ಮಾಡಲು ಬಳಸಿಕೊಂಡು ಹಣ ಸಂಪಾದಿಸಿ. ಇದು ನೀವು ಸಮಯ ಕಳೆಯಲು ನೆರವು ಮಾಡುತ್ತದೆ ಜೊತೆಗೆ ದುಡ್ಡಿಗಾಗಿ ಮನೆಯವನ್ನು ಅವಲಂಬಿಸುವ ಕಷ್ಟ ತಪ್ಪಿಸಿ, ನಿಮ್ಮನ್ನ ಸ್ವಾವಲಂಬಿಯಾಗಿಸುತ್ತದೆ.

ಹೊಸ ಪರಿಚಯವನ್ನು ಮಾಡಿಕೊಳ್ಳಿ
ನಿಮಗೆ ಸ್ನೇಹಿತರಿಲ್ಲ ಎನ್ನುವ ಭಾವನೆ ಇದ್ದರೆ, ಅದಕ್ಕೆ ಬೇಸರವಾಗುವ ಅವಶ್ಯಕತೆ ಇಲ್ಲ. ಮಹಿಳೆಯರಿಗಾಗಿಯೇ ಸಾಕಷ್ಟು ಕ್ಲಬ್ಗಳಿವೆ. ಅಲ್ಲಿ ಹೊಸ ಪರಿಚಯ ಮಾಡಿಕೋಳ್ಳಬಹುದು. ಅಥವಾ ಮನೆಯ ಸುತ್ತಮುತ್ತಲಿನವರ ಪರಿಚಯ ಮಾಡಿಕೊಳ್ಳಬಹುದು. ಅವರೊಂದಿಗೆ ನಿಮ್ಮ ದಿನ ಕಳೆಯಬಹುದು.

ಈ ಹ್ಯವಾಸಗಳನ್ನು ರೂಢಿಸಿಕೊಳ್ಳಿ:
- ಆಗಾಗ್ಗೆ ಹೊರಹೋಗುವ ಅಭ್ಯಾಸವಿಟ್ಟುಕೊಳ್ಳಿ
- ನಿಮ್ಮ ಸ್ನೇಹಿತರೊಂದಿಗೆ ಟ್ರಿಪ್ ಹೋಗುವುದು
- ಪ್ರಪಂಚ ಜ್ಞಾನ ತಿಳುವಳಿಕೆಗೆ ಆದ್ಯತೆ ನೀಡುವುದು
- ಪಾರ್ಟ್ಟೈಂ ಕೆಲಸ ಹುಡುಕಿಕೊಳ್ಳುವುದು

–ಲೇಖಕರು

ಫೊರ್ಟಿಸ್ ಆಸ್ಪತ್ರೆ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಯಾದ ಡಾ. ಆಕಾಂಕ್ಷಾ ಪಾಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.