ಸೋಮವಾರ, 4 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸುತ್ತಮುತ್ತಲಿನವರ ಬಗ್ಗೆ ಮೌನದಿಂದಿರುವುದು ಒಳಿತು
Published 3 ಆಗಸ್ಟ್ 2025, 19:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯಾಪಾರ –ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದುವರಿಯಲು ಸಹಾಯವಾಗುತ್ತದೆ. ಕೆಲಸ ಮತ್ತು ದುಡಿಮೆ ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ನೆಮ್ಮದಿಗೆ ಕೊರತೆ ಇಲ್ಲ. ಪರಿಸ್ಥಿತಿ ಸುಧಾರಿಸಲಿದೆ.
ವೃಷಭ
ಕೈಗೊಂಡ ಕಾರ್ಯ ಸಫಲವಾಗಲಿದೆ. ಆರೋಗ್ಯವು ಪಥ್ಯ ಮಾಡುವುದರಿಂದ ಸುಧಾರಣೆಗೆ ಬರುತ್ತದೆ. ಪರಿಚಯಸ್ಥರಿಂದ, ಸ್ನೇಹಿತರಿಂದ ಪಡೆದ ಸಾಲವನ್ನು ಮರುಪಾವತಿ ಮಾಡುವುದರಿಂದ ಗೌರವ ಸಿಗುತ್ತದೆ.
ಮಿಥುನ
ಕಷ್ಟ–ಸುಖಗಳಿಗೆ ನೆರವಾಗುವ ಮನೋಭಾವವನ್ನು ಬೆಳೆಸಿಕೊಳ್ಳಿ. ವೈದ್ಯರಿಗೆ ವೃತ್ತಿಯಲ್ಲಿ ಸಮಯ ಕಳೆಯಬೇಕಾದ ಅನಿವಾರ್ಯತೆ ಎದುರಾಗುವುದು. ವಿಘ್ನಗಳಿಗೆ ಹೆದರಬೇಡಿ.
ಕರ್ಕಾಟಕ
ವೈಯಕ್ತಿಕ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗುವುದು . ಖರ್ಚಿಗೆ ಕಾರಣವಾದೀತು. ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ.
ಸಿಂಹ
ದಾಯಾದಿಗಳು ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅವಕಾಶಗಳು ಒದಗಿ ಬರುತ್ತವೆ. ನೌಕರರಿಗೆ ಆರ್ಥಿಕವಾಗಿ ಅನುಕೂಲ.
ಕನ್ಯಾ
ಆಲಸ್ಯತನ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಉತ್ಸಾಹಭರಿತರಾಗಿರಿ. ಆಗಾಧ ಜ್ಞಾನ ಶಕ್ತಿ ಹೊರಹೊಮ್ಮಿ ಬರಲು ಸೂಕ್ತ ಕಾಲ. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ತುಲಾ
ಬಂಧು–ಮಿತ್ರರ ಸಲಹೆಗಳಿಗೆ ಗಮನ ನೀಡಿ, ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಒತ್ತಡಕ್ಕೆ ಸಿಲುಕದೆ ಕಾರ್ಯನಿರ್ವಹಿಸುವ ಎಲ್ಲರಿಂದಲೂ ಗುರುತಿಸಲಾಗುತ್ತದೆ.
ವೃಶ್ಚಿಕ
ಪುತ್ರನಿಗೆ ಬಹುದಿನಗಳಿಂದ ನಿರೀಕ್ಷಿಸಿದ ಉದ್ಯೋಗ ಸಿಗುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ. ನೂತನ ಶಿಶುವಿನ ಜನನ ಕುಟುಂಬದ ಸಂತೋಷಕ್ಕೆ ಕಾರಣವಾಗುತ್ತದೆ.
ಧನು
ಸುತ್ತಮುತ್ತಲಿನವರ ಬಗ್ಗೆ ಮೌನದಿಂದಿರುವುದು ಒಳಿತು. ನೆಚ್ಚಿನ ಬರವಣಿಗೆ ಹವ್ಯಾಸ ಪುನಃ ಆರಂಭಗೊಳ್ಳುವುದು. ಚಿಂತೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
ಮಕರ
ಕೋಪದ ಮತ್ತು ದಡ್ಡತನದ ತೀರ್ಮಾನದಿಂದ ಪಶ್ಚಾತ್ತಾಪ ಪಡುವಂಥ ಘಟನೆ ನಡೆಯುವುದು. ಪರಿಸ್ಥಿತಿ ಹಾಗೂ ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿ.
ಕುಂಭ
ಕೆಲಸದಲ್ಲಿ ಈ ದಿನ ವಿಘ್ನಗಳು ಎದುರಾದರೂ, ಅಪೇಕ್ಷಿತ ಫಲ ದೊರಕುವುದು. ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ನಂಬದಿರುವ ಪರಿಸ್ಥಿತಿ ಬರಬಹುದು. ನೆಮ್ಮದಿ ಹೆಚ್ಚಾಗುತ್ತದೆ.
ಮೀನ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಉತ್ತಮವಾದ ಯಶಸ್ಸನ್ನು ಕಾಣುವರು. ಸಂಕಲ್ಪಿತ ಕಾರ್ಯಸಿದ್ಧಿಗೆ ಗಣೇಶನನ್ನು ಪೂಜಿಸಿ.
ADVERTISEMENT
ADVERTISEMENT