ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results 2023| ‘ಇಂಡಿಯಾ’ ಮೇಲೆ ಪರಿಣಾಮ ಬೀರಲಿರುವ ಫಲಿತಾಂಶ

Published 2 ಡಿಸೆಂಬರ್ 2023, 16:08 IST
Last Updated 2 ಡಿಸೆಂಬರ್ 2023, 16:08 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ಕಡೆಗೆ ‘ಇಂಡಿಯಾ’ ಮೈತ್ರಿಕೂಟದ ಸದಸ್ಯಪಕ್ಷಗಳು ಗಮನ ಹರಿಸಿವೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಗೆ ಪ್ರದರ್ಶನ ನೀಡಿದೆ ಎಂಬುದು ಮೈತ್ರಿಕೂಟದ ರಚನೆ ಮೇಲೆ ಪ್ರಭಾವ ಬೀರಲಿದೆ. 

ಟಿಎಂಸಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು (ಎಸ್‌ಪಿ) ಈ ಹಿಂದೆಯೇ ಕಾಂಗ್ರೆಸ್‌ ಜೊತೆ ಸ್ಥಾನ ಹಂಚಿಕೆ ಕುರಿತು ಮಾತನಾಡಲು ಮುಂದಾಗಿದ್ದವು. ವಿಧಾನಸಭೆ ಚುನಾವಣೆಗಳ ಫಲಿತಾಂಶದ ನಂತರ ಈ ಕುರಿತು ಚರ್ಚಿಸೋಣ ಎಂದಿದ್ದ ಕಾಂಗ್ರೆಸ್‌ ಈ ಪ್ರಸ್ತಾವನೆಯನ್ನು ಬಾಕಿ ಇರಿಸಿತ್ತು. 

ಸದಸ್ಯ ಪಕ್ಷಗಳ ಜೊತೆ ಸದ್ಯ ಮಾತುಕತೆ ನಡೆಸುವುದು ಬೇಡ ಎಂದು ಕಾಂಗ್ರೆಸ್‌ನ ಉನ್ನತ ನಾಯಕತ್ವವು ಆಗಸ್ಟ್‌ ಅಂತ್ಯದಲ್ಲಿ ಮುಂಬೈನಲ್ಲಿ ನಡೆದಿದ್ದ ‘ಇಂಡಿಯಾ’ ಸಭೆ ಬಳಿಕ ತೀರ್ಮಾನಿಸಿತ್ತು. 

ಚುನಾವಣೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ನಿರೀಕ್ಷೆ ಹೊಂದಿರುವ ಕಾಂಗ್ರೆಸ್‌, ಇದೇ ನೆಪದಲ್ಲಿ ಹೆಚ್ಚು ಸ್ಥಾನಗಳಿಗಾಗಿ ಚೌಕಾಸಿ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಭಾನುವಾರ ಫಲಿತಾಂಶ ಹೊರಬೀಳುತ್ತಿದ್ದಂತೆ ದೊಡ್ಡಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. ಪ್ರಾದೇಶಿಕ ಪಕ್ಷಗಳ ಜೊತೆ ಇರುವ ಭಿನ್ನಾಭಿಪ್ರಾಯವನ್ನು ತೊಡೆದುಹಾಕುವಂತೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾನ ಹಂಚಿಕೆ ಆಗಬೇಕು ಎಂಬ ದಿಸೆಯಲ್ಲಿ ಮಾತುಕತೆಗಳು ಸದಸ್ಯ ಪಕ್ಷಗಳ ನಡುವೆ ನಡೆಯಲಿವೆ.

ವಿಧಾನಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಹಿಂದೇಟು ಹಾಕಿತ್ತು. ಇದು ಎಸ್‌ಪಿ ಸೇರಿ, ಜೆಡಿಯು ಸೇರಿ ಹಲವು ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ಮಾತ್ರ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಕಾಂಗ್ರೆಸ್‌ ನಾಯಕರು ವಾದಿಸಿದ್ದರು.

ಛತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಜೊತೆ ನೇರ ಸ್ಪರ್ಧೆಯಲ್ಲಿರುವುದು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ಮಾತ್ರವೇ ತೆಲಂಗಾಣದಲ್ಲೂ ಬಿಆರ್‌ಎಸ್‌ಗೆ ಸ್ಪರ್ಧೆ ಒಡ್ಡಿರುವುದು ಎಂದು ಪಕ್ಷವು ಆ ವೇಳೆ ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT