ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಉದ್ಘಾಟನೆ: ಕರಸೇವಕಪುರ ತಲುಪಿದ 1,265 ಕೆ.ಜಿ ತೂಕದ ಪ್ರಸಾದದ ಲಡ್ಡು

Published 20 ಜನವರಿ 2024, 3:17 IST
Last Updated 20 ಜನವರಿ 2024, 3:17 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತಾಧಿಗಳು ಅಯೋಧ್ಯೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಹೈದರಾಬಾದ್‌ನಿಂದ ಭಕ್ತರು ಕಳುಹಿಸಿದ್ದ 1,265 ಕೆ.ಜಿ ತೂಕದ ಪ್ರಸಾದದ ಲಡ್ಡು ಕರಸೇವಕಪುರಕ್ಕೆ ತಲುಪಿದ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಪ್ರಸಾದದ ಲಡ್ಡುವನ್ನು ತಯಾರಿಸಿದ ಶ್ರೀ ರಾಮ್ ಕ್ಯಾಟರಿಂಗ್ ಸರ್ವಿಸಸ್‌ನ ಮಾಲೀಕ ಎನ್. ನಾಗಭೂಷಣ ರೆಡ್ಡಿ ಮಾತನಾಡಿ, ‘ದೇವರು ನನ್ನ ವ್ಯಾಪಾರ ಮತ್ತು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಾನೆ. ನಾನು ಬದುಕಿರುವವರೆಗೂ ದೇವರಿಗಾಗಿ ಪ್ರತಿ ದಿನ 1 ಕೆ.ಜಿ ಲಡ್ಡು ತಯಾರಿಸಲು ವಾಗ್ದಾನ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಎರಡು ದಿನಗಳು ಬಾಕಿಯಿದ್ದು, ಬಾಲರಾಮನ ವಿಗ್ರಹದ ಮೊದಲ ಚಿತ್ರವನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಶುಕ್ರವಾರ ಬಿಡುಗಡೆಗೊಳಿಸಿತ್ತು.

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಈ ವಿಗ್ರಹವನ್ನು ಗುರುವಾರ ರಾಮಮಂದಿರದ ಗರ್ಭಗುಡಿಯ ಪೀಠದಲ್ಲಿ ಇಡಲಾಗಿತ್ತು. ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿ ಧಾರ್ಮಿಕ ವಿಧಿಗಳು ಶನಿವಾರವೂ ಮುಂದುವರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT