ಕೋಲ್ಕತ್ತ: ಇಲ್ಲಿನ ಜವಾಹರಲಾಲ್ ನೆಹರು ರಸ್ತೆಯಲ್ಲಿರುವ ಭಾರತೀಯ ವಸ್ತು ಸಂಗ್ರಹಾಲಯಕ್ಕೆ ಇಂದು (ಮಂಗಳವಾರ) ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆದರಿಕೆ ಕರೆಯ ಬಗ್ಗೆ ವಸ್ತು ಸಂಗ್ರಹಾಲಯದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿತು. ಬಳಿಕ ಸಂಪೂರ್ಣ ಶೋಧ ಕಾರ್ಯ ಆರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ.

ವಸ್ತು ಸಂಗ್ರಹಾಲಯದಲ್ಲಿ ಬಾಂಬ್ಗಳನ್ನು ಇಡಲಾಗುವುದು ಎಂದು ಇಂದು (ಮಂಗಳವಾರ) ವಸ್ತು ಸಂಗ್ರಹಾಲಯದ ಅಧಿಕಾರಿಗಳಿಗೆ ಇಮೇಲ್ ಬಂದಿತ್ತು. ಆದರೆ, ಸಂದೇಶದಲ್ಲಿ ನಿಖರವಾದ ಸ್ಥಳವನ್ನು ನಿರ್ದಿಷ್ಟಪಡಿಸಿರಲಿಲ್ಲ. ವಸ್ತು ಸಂಗ್ರಹಾಲಯದಲ್ಲಿ 51ಕ್ಕೂ ಹೆಚ್ಚು ಕೊಠಡಿಗಳಿದ್ದು, ಅವುಗಳನ್ನು ಭದ್ರತಾ ಸಿಬ್ಬಂದಿ ಶೋಧಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರಿಂದ ಅನುಮತಿ ಸಿಗುವವರೆಗೂ ವಸ್ತು ಸಂಗ್ರಹಾಲಯವನ್ನು ಸಂದರ್ಶಕರಿಗೆ ಮುಚ್ಚಲಾಗಿತ್ತು ಎಂದು ಮೂಲಗಳು ತಿಳಿಸಿವೆ.
.75 ವರ್ಷಕ್ಕೆ ನಿವೃತ್ತಿ ಹೊಂದಬೇಕು ಎಂದು ಬಿಜೆಪಿಯಲ್ಲಿ ನಿಯಮವಿಲ್ಲ: ಬಾವಂಕುಲೆ.CSK ಹಿಂದಿಕ್ಕಿ ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಸಾಧನೆ ಮಾಡಿದ RCB.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.