ನವದೆಹಲಿ: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಾದಿನಿ, ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಿ ಸೀತಾ ಸೊರೇನ್ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ.

ಬಿಜೆಪಿ ಸೇರುವ ಗಂಟೆಯ ಮೊದಲು ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷವನ್ನು ತೊರೆದಿದ್ದಾರೆ. ಆಡಳಿತಾರೂಢ ಪಕ್ಷದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ದೂರವಿಡಲಾಗುತ್ತಿದೆ ಎಂದು ಸೀತಾ ಆರೋಪಿಸಿದ್ಧಾರೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜಾರ್ಖಂಡ್ ಚುನಾವಣಾ ಉಸ್ತುವಾರಿ ಲಕ್ಷ್ಮಿಕಾಂತ ಬಾಜ್ಪೈ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಸೀತಾ ಸೊರೇನ್ ಬಿಜೆಪಿ ಸೇರಿದ್ದಾರೆ.

ಮೂರು ಬಾರಿ ಶಾಸಕಿಯಾಗಿದ್ದ ಸೀತಾ ಅವರ ಬಿಜೆಪಿ ಸೇರ್ಪಡೆಯಿಂದ, ಜೆಎಂಎಂನ ಮತ ಬ್ಯಾಂಕ್ ಆದ ಆದಿವಾಸಿ ಜನರನ್ನು ಸೆಳೆಯುವ ಬಿಜೆಪಿ ತಂತ್ರಕ್ಕೆ ಶಕ್ತಿ ತುಂಬಿದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜೆಎಂಎಂ ಅಧ್ಯಕ್ಷ ಹಾಗೂ ತಮ್ಮ ಮಾವ ಶಿಬುಲಾಲ್ ಸೊರೇನ್ ಅವರಿಗೆ ಪತ್ರ ಬರೆದಿರುವ ಸೀತಾ, ‘ಪತಿ ದುರ್ಗಾ ಸೊರೇನ್ ನಿಧನದ ನಂತರ ಪಕ್ಷವು, ತನಗೆ ಹಾಗೂ ತನ್ನ ಕುಟುಂಬಕ್ಕೆ ಸರಿಯಾದ ಸ್ಥಾನಮಾನ ನೀಡಿಲ್ಲ. ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವ ಕಾಡುತ್ತಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಜೆಎಂಎಂಗೆ ರಾಜೀನಾಮೆ ಸಲ್ಲಿಸುವ ಮಾರ್ಗ ಬಿಟ್ಟು ನನ್ನ ಮುಂದೆ ಅನ್ಯ ಮಾರ್ಗವಿಲ್ಲ’ ಎಂದಿದ್ದಾರೆ.

ಸೀತಾ ಸೊರೇನ್ ಅವರ ರಾಜೀನಾಮೆ ಕುರಿತು ಪಕ್ಷದ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಅವರು ಪ್ರತಿಕ್ರಿಯಿಸಿ, ‘ರಾಜೀನಾಮೆ ಸಲ್ಲಿಸಿರುವ ಕುರಿತು ಮಾಹಿತಿ ಇದೆ. ಆದರೆ ಅಧಿಕೃತಕವಾಗಿ ಪತ್ರ ಇನ್ನೂ ತಲುಪಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.