ನವದೆಹಲಿ: ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನ ಮೇರೆಗೆ ಜಿ7 ರಾಷ್ಟ್ರಗಳ ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಜೂನ್ ತಿಂಗಳಲ್ಲಿ ಜಿ7 ರಾಷ್ಟ್ರಗಳ ನಾಯಕರ ಶೃಂಗಸಭೆ ಆಯೋಜನೆಗೊಂಡಿದ್ದು, ಕೆನಡಾ ಅದರ ಆತಿಥ್ಯ ವಹಿಸಿಕೊಂಡಿದೆ. ಕನಾನಸ್ಕಿಸ್ನಲ್ಲಿ ನಡೆಯಲಿರುವ ಶೃಂಗದಲ್ಲಿ ಪಾಲ್ಗೊಳ್ಳುವಂತೆ ಕಾರ್ನಿ ಅವರು ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ವಿಷಯವನ್ನು ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಆಳವಾದ ನಂಬಿಕೆಯುಳ್ಳ ರಾಷ್ಟ್ರಗಳಾದ ಭಾರತ ಮತ್ತು ಕೆನಡಾ ಸಂಬಂಧಗಳು ಉಭಯ ರಾಷ್ಟ್ರಗಳ ಜನರ ಆಳವಾದ ಸಂಬಂಧಗಳೊಂದಿಗೆ ಬೆಳೆದಿದೆ. ಪರಸ್ಪರ ಗೌರವ ಮತ್ತು ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳುವ ಮೂಲಕ ಎರಡೂ ರಾಷ್ಟ್ರಗಳು ಜತೆಗೂಡಿ ಕೆಲಸ ಮಾಡಲಿವೆ. ಶೃಂಗದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಹಿಂದಿನ ಪ್ರಧಾನಿ ಜಸ್ಟಿನ್ ಟ್ರೂಡ್ ಅವರ ಆಡಳಿತದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ವಿಷಯದಲ್ಲಿ ಭಾರತ ಮತ್ತು ಕೆನಡಾ ಸಂಬಂಧ ಹಳಸಿತ್ತು. ಕಾರ್ನಿ ಅವರ ಇತ್ತೀಚಿನ ಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಇದರ ಬೆನ್ನಲ್ಲೇ ಏಳು ರಾಷ್ಟ್ರಗಳ ಮುಖಂಡರನ್ನು ಒಳಗೊಂಡ ಜಿ7 ಶೃಂಗಕ್ಕೆ ಭಾರತವನ್ನು ಆಹ್ವಾನಿಸುವ ಕ್ರಮವನ್ನು ಕೆನಡಾ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.