ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಮಾರಾಟ: ಡ್ರಗ್‌ ಪೆಡ್ಲರ್‌ ಬಂಧನ, 20 ಲಕ್ಷ ಮೌಲ್ಯದ ಎಂಡಿ ವಶ

ಡೆಲಿವರಿ ಬಾಯ್‌ ಸೋಗಿನಲ್ಲಿ ಮಾದಕ ವಸ್ತು ಮಾರಾಟ–ಮುಂಬೈ ಪೊಲೀಸರಿಂದ ಆರೋಪಿಯ ಬಂಧನ.
Published 21 ಅಕ್ಟೋಬರ್ 2023, 3:29 IST
Last Updated 21 ಅಕ್ಟೋಬರ್ 2023, 3:29 IST
ಅಕ್ಷರ ಗಾತ್ರ

ಮುಂಬೈ (ಮಹಾರಾಷ್ಟ್ರ): ಡೆಲಿವರಿ ಬಾಯ್‌ ಸೋಗಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತೋಫಿಕ್ ಗುಲಾಮ್ ಮೊಹಮ್ಮದ್ ಬಂಧಿತ ಆರೋಪಿ.

ಮುಂಬೈನ ಮಾಲ್ವಾನಿ ಪ್ರದೇಶದಲ್ಲಿ ಪೆಡ್ಲರ್ ಡೆಲಿವರಿ ನೆಪದಲ್ಲಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಎಂದು ಪೊಲೀಸರಿಗೆ ರಹಸ್ಯ ಮಾಹಿತಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆತನಿಂದ 200 ಗ್ರಾಂ ಎಂಡಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸಂಗ್ರಹಿಸಲು ಬಂದಿದ್ದ ಇತರ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಬಂಧಿತನಿಂದ ₹20 ಲಕ್ಷ ಮೌಲ್ಯದ ಮೆಫೆಡ್ರೋನ್ (ಎಂಡಿ) ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT