ನವದೆಹಲಿ: ಪುಣೆಯಲ್ಲಿ ನಡೆದಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಆರೋಪಿಗಳಾದ ಅಮರ್ ಸತೀಶ್ ಗಾಯಕ್ವಾಡ್, ಆದಿತ್ಯ ಅವಿನಾಶ ಸೂದ್ ಮತ್ತು ಆಶಿಶ್ ಸತೀಶ್ ಮಿತ್ತಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

‘ಬಾಲಕ ಮದ್ಯ ಸೇವಿಸಿರುವುದು ಬೇರೆ ವಿಚಾರ. ಆದರೆ, ಸಂಭ್ರಮದ ಸಂದರ್ಭದಲ್ಲಿ ಮಕ್ಕಳಿಗೆ ಕಾರ್ ಕೀ ಮತ್ತು ಹಣ ನೀಡುವುದು ಸ್ವೀಕಾರಾರ್ಹ ವಿಚಾರವಲ್ಲ. ಮಕ್ಕಳು ಎಸಗುವ ಇಂಥ ಕೃತ್ಯಗಳಿಗೆ ಪೋಷಕರೇ ಹೊಣೆ’ ಎಂದು ನ್ಯಾಯಪೀಠ ಹೇಳಿದೆ.

ಜಾಮೀನು ಕೋರಿ ಆರೋಪಿ ಅಮರ್ ಸತೀಶ್ ಗಾಯಕ್ವಾಡ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಜನವರಿ 23ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು.

2024 ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು.
.ಪೋಶೆ ಕಾರು ಅಪಘಾತ ಪ್ರಕರಣ: ಮತ್ತೆ ರಕ್ತದ ಮಾದರಿ ತಿರುಚಲು ಯತ್ನಿಸಿದ್ದ ಆರೋಪಿಗಳು!.ಪೋಶೆ ಕಾರು ಅಪಘಾತ: ಪೊಲೀಸರ ಮನವಿ ತಿರಸ್ಕರಿಸಿದ ಜೆಜೆಬಿ.ಪೋಶೆ ಕಾರು ಅಪಘಾತ: ಹಾಸ್ಯ ಕಲಾವಿದ ಉತ್ಸವ್ ದೀಕ್ಷಿತ್ ಬಂಧನ.ಪೋಶೆ ಕಾರು ಅಪಘಾತ ಪ್ರಕರಣ: ಆರೋಪಿ ಬಾಲಕನ ತಾಯಿ ಜೈಲಿನಿಂದ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.