ಪಚ್ಮಢಿ (ಮಧ್ಯ ಪ್ರದೇಶ): ‘ಮತ ಕಳ್ಳತನದ ಆರೋಪಗಳನ್ನು ಮರೆಮಾಚಲು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡಲಾಗುತ್ತಿದೆ ಮತ್ತು ಅದನ್ನು ಸಾಂಸ್ಥೀಕರಣಗೊಳಿಸಲಾಗುತ್ತಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು.

ಮಧ್ಯಪ್ರದೇಶದ ನರ್ಮದಾಪುರಂನ ಪಚಮಢಿ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾಂಗ್ರೆಸ್ ಅಧ್ಯಕ್ಷರ ತರಬೇತಿ ಶಿಬಿರದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಮತ ಕಳ್ಳತನ ದೊಡ್ಡ ಸಮಸ್ಯೆಯಾಗಿದೆ. ಆದರೆ, ಅದನ್ನು ಎಸ್ಐಆರ್ ಮೂಲಕ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ’ ಎಂದು ಅವರು ದೂರಿದರು.

‘ಇತ್ತೀಚೆಗಷ್ಟೇ ನಾನು ಹರಿಯಾಣದಲ್ಲಿ ನಡೆದ ಮತ ಕಳ್ಳತನದ ಬಗ್ಗೆ ಪುರಾವೆಗಳೊಂದಿಗೆ ಪ್ರಸ್ತಾಪಿಸಿದ್ದೆ. ಅಲ್ಲಿ 25 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿತ್ತು. ಅಂದರೆ ಪ್ರತಿ ಎಂಟು ಮತಗಳಲ್ಲಿ ಒಂದು ಕದ್ದ ಮತವಾಗಿತ್ತು’ ಎಂದು ಅವರು ಆರೋಪಿಸಿದರು.

‘ಹರಿಯಾಣದ ದತ್ತಾಂಶ ಗಮನಿಸಿದ ಬಳಿಕ ನನಗೆ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸಗಢದಲ್ಲಿಯೂ ಅದೇ ರೀತಿ ಮತ ಕಳ್ಳತನ ನಡೆದಿರಬಹುದು ಎಂದೆನಿಸುತ್ತದೆ. ಏಕೆಂದರೆ, ಅದು ಬಿಜೆಪಿ ಮತ್ತು ಚುನಾವಣಾ ಆಯೋಗದ ವ್ಯವಸ್ಥೆಯಾಗಿದೆ’ ಎಂದು ಅವರು ಕಿಡಿಕಾರಿದರು.

‘ನಮ್ಮ ಬಳಿ ಇನ್ನಷ್ಟು ಪುರಾವೆಗಳಿವೆ. ಈಗ ಬಿಡುಗಡೆ ಮಾಡಿರುವುದು ಸ್ವಲ್ಪವಷ್ಟೇ. ಉಳಿದದ್ದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಪ್ರಜಾಪ್ರಭುತ್ವ ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಅವರು ಜಂಟಿಯಾಗಿ ಈ ದಾಳಿ ನಡೆಸುತ್ತಿದ್ದಾರೆ. ಇದರಿಂದ ದೇಶ ನರಳುತ್ತಿದೆ. ಭಾರತ ಮಾತೆಗೆ ಹಾನಿಯಾಗುತ್ತಿದೆ’ ಎಂದು ಅವರು ಅವರು ಆರೋಪಿಸಿದರು.
.ಬಿಹಾರದಲ್ಲಿ ರಾಹುಲ್ ಗಾಂಧಿ ‘ಅಂಗಡಿ’ ಮುಚ್ಚುವುದು ಖಚಿತ: ಅಮಿತ್ ಶಾ.ಬಿಹಾರದಲ್ಲೂ ಮತಗಳ್ಳತನ; ಚುನಾವಣಾ ಆಯುಕ್ತರೇ ದೋಷಿಗಳು ಎಂದ ರಾಹುಲ್ ಗಾಂಧಿ.
ಮೋದಿ ಶಾ ಮತಕಳವಿನಲ್ಲಿ ಸಿಕ್ಕಿಬೀಳುತ್ತಾರೆ: ರಾಹುಲ್

ಕಿಶನ್ಗಂಜ್: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎಲ್ಲಿ ಬೇಕಾದರೂ ಓಡಾಡಿಕೊಂಡು ಇರಬಹುದು. ಆದರೆ ಅವರು ಅಂತಿಮವಾಗಿ ಮತ ಕಳ್ಳತನದಲ್ಲಿ ಸಿಕ್ಕಿ ಬೀಳುತ್ತಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು. ಇಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಹಾರದ ಚುನಾವಣೆ ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿದೆ. ಆರ್ಎಸ್ಎಸ್ ಮತ್ತು ಬಿಜೆಪಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದರೆ ‘ಇಂಡಿಯಾ’ ಬಣ ಜನರನ್ನು ಒಗ್ಗೂಡಿಸಲು ಯತ್ನಿಸುತ್ತಿದೆ ಎಂದರು. ಮತ ಕಳವು ಆರೋಪಗಳಿಗೆ ಮೋದಿ ಶಾ ಮತ್ತು ಚುನಾವಣಾ ಆಯೋಗದ ಬಳಿ ಉತ್ತರ ಇಲ್ಲವಾಗಿದೆ. ಸತ್ಯ ಈಗ ಜನರ ಮುಂದೆಯೇ ಸ್ಪಷ್ಟವಾಗಿದೆ. ಜನರು ಒಂದಾಗಿ ಮತಕಳ್ಳತನ ನಿಲ್ಲಿಸಿದರೆ ‘ಇಂಡಿಯಾ’ ಬಣ ಬಿಹಾರದಲ್ಲಿ ಸರ್ಕಾರ ರಚಿಸುವುದು ಖಚಿತ ಎಂದು ಅವರು ಪ್ರತಿಪಾದಿಸಿದರು. ‘ಬಿಹಾರದಲ್ಲಿ ನ. 6ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಕೆಲ ಅರ್ಹ ಮತದಾರರಿಗೆ ಮತದಾನಕ್ಕೆ ಅವಕಾಶ ದೊರೆತಿರಲಿಲ್ಲ. ಇನ್ನೊಂದೆಡೆ ದೆಹಲಿಯಲ್ಲಿ ಮತದಾನದ ಹಕ್ಕು ಹೊಂದಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ಬಿಹಾರದಲ್ಲೂ ಮತ ಚಲಾಯಿಸಿದ್ದರು. ಒಬ್ಬರು ಒಂದೇ ಕಡೆ ಮಾತ್ರ ಮತ ಚಲಾಯಿಸಬೇಕು ಎಂದು ಹೇಳುವ ಚುನಾವಣಾ ಆಯೋಗ ಇಲ್ಲಿಯವರೆಗೂ ಆ ನಾಯಕರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿರುವ ಮತ ಕಳವು ಕುರಿತು ನಾನು ಮಾಡಿದ ಆರೋಪಗಳಿಗೂ ಪ್ರತಿಕ್ರಿಯಿಸಿಲ್ಲ’ ಎಂದು ರಾಹುಲ್ ಕಿಡಿಕಾರಿದರು.
.ರಾಹುಲ್ ಗಾಂಧಿ ದೊಡ್ಡ ಚೋರ್, ಅವರ ಖಾಂದಾನ್ ದೊಡ್ಡ ಚೋರ್: ಛಲವಾದಿ ನಾರಾಯಣಸ್ವಾಮಿ.ಹರಿಯಾಣದಲ್ಲೂ ಮತಗಳವು; ಕಾಂಗ್ರೆಸ್ ಜಯ ಕಸಿದುಕೊಂಡ ಬಿಜೆಪಿ: ರಾಹುಲ್ ಗಾಂಧಿ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.