ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟೂ ಅವರ ನಡುವೆ ಸಂಸತ್ತಿನ ಆವರಣದಲ್ಲಿ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು.

ಇಬ್ಬರೂ ನಾಯಕರು ಪರಸ್ಪರರತ್ತ ಕೈ ತೋರಿಸಿ ಟೀಕಿಸಿದರು. ಸಚಿವ ಬಿಟ್ಟು ಅವರನ್ನು ರಾಹುಲ್ ‘ಮಿತ್ರ ದ್ರೋಹಿ’ ಎಂದು ಟೀಕಿಸಿದರೆ ಬಿಟ್ಟೂ ಅವರು ರಾಹುಲ್ ಅವರನ್ನು ‘ದೇಶದ ಶತ್ರು’ ಎಂದು ತರಾಟೆಗೆ ತೆಗೆದುಕೊಂಡರು. ಈ ಬೆಳವಣಿಗೆಯು ಸಿಖ್ಖರನ್ನು ಕೆರಳಿಸಿದೆ ಎಂದು ಆಡಳಿತಾರೂಢ ಬಿಜೆಪಿ ಟೀಕಿಸಿದೆ.

ಬಿಟ್ಟೂ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ರಾಹುಲ್ ಅವರ ನಿಕಟವರ್ತಿಯಾಗಿದ್ದರು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಬಳಿ ಬೆಳಿಗ್ಗೆ 11.30ಕ್ಕೆ ರಾಹುಲ್–ಬಿಟ್ಟೂ ನಡುವೆ ಮಾತಿನ ಚಕಮಕಿ ನಡೆಯಿತು.

ಅದು ಹೊಸ ಸಂಸತ್ ಭವನಕ್ಕೆ ಸಂಸದರು ಪ್ರವೇಶಿಸುವ ದ್ವಾರ. ನಡೆದದ್ದೇನು?:

ಕಲಾಪದಿಂದ ಅಮಾನತುಗೊಂಡಿರುವ ಎಂಟು ಸಂಸದರ ಜತೆ ರಾಹುಲ್ ಗಾಂಧಿ ಮಕರ ದ್ವಾರದ ಬಳಿ ಮಾತುಕತೆಯಲ್ಲಿ ತೊಡಗಿದ್ದರು. ಆ ಗುಂಪಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಜಾಬಿನ ಸಂಸದರೇ ಇದ್ದರು. ಈ ವೇಳೆ ಸಚಿವ ಬಿಟ್ಟೂ ಅವರು ಅಲ್ಲಿಯೇ ಹಾದು ಹೋಗುವ ಸಂದರ್ಭದಲ್ಲಿ ಈ ವಾಕ್ಸಮರ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಅಮಾನತುಗೊಂಡ ಕಾಂಗ್ರೆಸ್ ಸಂಸದರನ್ನು ಕಂಡ ಸಚಿವರು ‘ಯುದ್ಧದಲ್ಲಿ ಗೆದ್ದವರಂತೆ ಇಲ್ಲಿ ಕುಳಿತಿದ್ದೀರಲ್ಲ’ ಎಂದು ಮೊದಲಿಗೆ ಪ್ರಶ್ನಿಸಿದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ರಾಹುಲ್ ‘ವಿಷಯವೇನಂದರೆ... ಇಲ್ಲಿ ಒಬ್ಬ ಮಿತ್ರದ್ರೋಹಿ ನಡೆದುಕೊಂಡು ಬರುತ್ತಿದ್ದಾರೆ. ಅವರ ಮುಖವನ್ನು ನೋಡಿ ಹೇಗೆ ಕಾಣುತ್ತಿದ್ದಾರೆ’ ಎಂದರು. ಬಳಿಕ ರಾಹುಲ್ ಅವರು ಸಚಿವರ ಕೈಕುಲುಕಲು ಮುಂದಾದರು. ಅದಕ್ಕೆ ಸಚಿವರು ನಿರಾಕರಿಸಿದರು.

ಆಗ ನಮಸ್ಕರಿಸಿದ ರಾಹುಲ್ ‘ನಮಸ್ಕಾರ ಸಹೋದರ ನನ್ನ ಮಿತ್ರದ್ರೋಹಿ’ ಎಂದು ಕೆಣಕಿದರು. ಇದರಿಂದ ಕೆರಳಿದ ಸಚಿವ ಬಿಟ್ಟೂ ಅವರು ರಾಹುಲ್ ಕಡೆ ಕೈ ತೋರಿಸುತ್ತಾ ‘ನೀವು ದೇಶದ ಶತ್ರು’ ಎಂದರು. ಆಗ ‘ಚಿಂತಿಸಬೇಡಿ ನೀವು ನಮ್ಮಲ್ಲಿಗೇ (ಕಾಂಗ್ರೆಸ್ಗೆ) ಮರಳುವಿರಿ’ ಎಂದು ರಾಹುಲ್ ಹೇಳಿದರು. ಇದೇ ವೇಳೆ ಅಮಾನತುಗೊಂಡ ಸಂಸದರು ಒಟ್ಟಾಗಿ ಸಚಿವ ಬಿಟ್ಟೂ ಅವರನ್ನು ಅಪಹಾಸ್ಯ ಮಾಡಿದರು. ಆಗ ರಾಹುಲ್ ಮತ್ತು ಆ ಸಂಸದರತ್ತ ಕೈ ತೋರಿದ ಸಚಿವರು ‘ನೀವು ದೇಶದ ಶತ್ರು’ ಎಂದು ಪುನರುಚ್ಚರಿಸುತ್ತಾ ಮೆಟ್ಟಿಲುಗಳನ್ನು ಹತ್ತಿಕೊಂಡು ಸಾಗಿದರು. ಅಲ್ಲಿದ್ದ ಕಾಂಗ್ರೆಸ್ ಸಂಸದರು ‘ನೀವು ಶರಣಾಗಿದ್ದೀರಿ ಶರಣಾಗಿದ್ದೀರಿ’ ಎಂದು ಕೂಗಿದರು. ವಿಡಿಯೊ ಹಂಚಿಕೊಂಡ ಕಾಂಗ್ರೆಸ್: ಈ ಮಾತಿನ ಚಕಮಕಿ ಕುರಿತ ವಿಡಿಯೊ ತುಣುಕನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಪಂಜಾಬ್ನ ದಿವಂಗತ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಬಿಟ್ಟೂ ಅವರು ಮೊದಲು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು. 2024ರಲ್ಲಿ ಅವರು ಬಿಜೆಪಿಗೆ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.