ನವದೆಹಲಿ: ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕೆಲ ತಿಂಗಳ ಹಿಂದೆ ಜೈಲಿನಲ್ಲೇ ಮೃತಪಟ್ಟ ಗ್ಯಾಂಗ್ಸ್ಟರ್–ರಾಜಕಾರಣಿ ಮುಖ್ತಾರ್ ಅಬ್ಬಾಸ್ ಅವರ ಮಗ ಅಬ್ಬಾಸ್ ಅನ್ಸಾರಿ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಂಕಜ್ ಮಿತ್ತಲ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಜಾಮೀನು ನೀಡಿದೆ.

ಜಾಮೀನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಅನ್ಸಾರಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಆಗಸ್ಟ್ 14ರಂದು ಇ.ಡಿಗೆ ನೋಟಿಸ್ ಜಾರಿ ಮಾಡಿದ್ದ ಸುಪ್ರೀಂ ಕೋರ್ಟ್, ಪ್ರತಿಕ್ರಿಯೆ ಕೇಳಿತ್ತು.

ಇದಕ್ಕೂ ಮೊದಲು, ಜೈಲಿನಲ್ಲಿ ಪತ್ನಿಯ ಮೊಬೈಲ್ ಮೂಲಕ ಕರೆ ಮಾಡಿ ಸಾಕ್ಷಿದಾರರು ಮತ್ತು ಅಧಿಕಾರಿಗಳನ್ನು ಬೆದರಿಸಿದ ಆರೋಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಮತ್ತೊಂದು ಪೀಠ ಅನ್ಸಾರಿಗೆ ಜಾಮೀನು ನೀಡಿತ್ತು.

'ತನಿಖೆ ಮುಕ್ತಾಯವಾಗಿದ್ದು, ಚಾರ್ಜ್ಶೀಟ್ ಸಲ್ಲಿಸಲಾಗಿದೆ. ತ್ವರಿತವಾಗಿ ಮುಗಿಯಬೇಕಿದ್ದ ಪ್ರಕರಣದಲ್ಲಿ ಅರ್ಜಿದಾರರು ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ಮುಕ್ತಾಯಕ್ಕೆ ಮತ್ತಷ್ಟು ಸಮಯ ಹಿಡಿಯುವುದನ್ನು ಗಮನದಲ್ಲಿಟ್ಟುಕೊಂಡು ಜಾಮೀನಿನ ಬಾಂಡ್ ಮೇಲೆ ಬಿಡುಗಡೆಗೆ ಆದೇಶಿಸಲಾಗಿದೆ’ಎಂದು ಪೀಠ ಹೇಳಿದೆ.

ಅನ್ಸಾರಿ ಚಿತ್ರಕೂಟ ಜಿಲ್ಲಾ ಕಾರಾಗೃಹದಲ್ಲಿದ್ದಾಗ ಅವರ ಪತ್ನಿ, ಡ್ರೈವರ್ ಮತ್ತು ಸಹ ಆರೋಪಿ ನಿಜಾಜ್ ಭೇಟಿಗೆ ಬಂದಿದ್ದರು. ಈ ಸಂದರ್ಭ ಅನ್ಸಾರಿ, ಪತ್ನಿಯ ಮೊಬೈಲ್ ಬಳಸಿ ಸಾಕ್ಷಿಗಳಿಗೆ ಬೆದರಿಕೆ ಮತ್ತು ಹಣದ ಸುಲಿಗೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಮೇ 9ರಂದು ಹೈಕೋರ್ಟ್ ಜಾಮೀನು ತಿರಸ್ಕರಿಸಿ ಆದೇಶಿಸಿತ್ತು.

ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮೌ ಕ್ಷೇತ್ರದ ಶಾಸಕ ಅಬ್ಬಾಸ್ ಅನ್ಸಾರಿ ವಿರುದ್ಧ 200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.