ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಬಿಜೆಪಿ ತೊರೆದ ಸಿಂಧಿಯಾ ಬೆಂಬಲಿಗರು ‘ಕೈ’ ಸೇರ್ಪಡೆ

Published 27 ಜೂನ್ 2023, 14:36 IST
Last Updated 27 ಜೂನ್ 2023, 14:36 IST
ಅಕ್ಷರ ಗಾತ್ರ

ಭೋಪಾಲ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ, ಬಿಜೆಪಿಯ ಶಿವಪುರಿ ಜಿಲ್ಲೆಯ ಉಪಾಧ್ಯಕ್ಷ ರಾಕೇಶ್ ಗುಪ್ತಾ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು, ಕಾಂಗ್ರೆಸ್‌ಗೆ ಸೋಮವಾರ ಸೇರ್ಪಡೆಗೊಂಡಿದ್ದಾರೆ. 

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಬೆಳವಣಿಗೆ ನಡೆದಿದೆ. 

ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಅವರ ಸರ್ಕಾರವು ಪತನಗೊಂಡು ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಗುಪ್ತಾ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಸಿಂಧಿಯಾ ಕೂಡಾ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಭೋಪಾಲ್‌ನಲ್ಲಿ ಸೋಮವಾರ ಗುಪ್ತಾ ಅವರು ಸುಮಾರು 500 ಮಂದಿ ಬೆಂಬಲಿಗರೊಂದಿಗೆ ಎಂಪಿಸಿಸಿ ಅಧ್ಯಕ್ಷ ಕಮಲ್‌ನಾಥ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸೇರ್ಪಡೆಯಾದರು ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ. 

ಇದೇ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT