ಮುಂಬೈ: ಪಕ್ಷಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಚುನಾವಣಾ ಆಯೋಗ ಗುರುವಾರ ಹಂಚಿಕೆ ಮಾಡಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)–ಶರದ್ಚಂದ್ರ ಪವಾರ್ ಬಣ ವಕ್ತಾರ ಕ್ಲೈಡ್ ಕ್ರಾಸ್ಟೊ ತಿಳಿಸಿದ್ದಾರೆ.

‘ಪಕ್ಷದ ಅಭ್ಯರ್ಥಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಹೊಸ ಚಿಹ್ನೆಯಡಿ ಸ್ಪರ್ಧಿಸುವರು’ ಎಂದು ತಿಳಿಸಿದ್ದಾರೆ.

ನೂತನ ಚಿಹ್ನೆ ಕುರಿತು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಕವಿ ಕುಸುಮಾಗ್ರಜ ಅವರ ‘ತುತರಿ’ ಕವನದ ಸಾಲುಗಳನ್ನು ಹಂಚಿಕೊಂಡಿದೆ.

‘ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ–ಸಾಹಸದ ಪ್ರತೀಕದಂತಿದ್ದ ಕಹಳೆ, ದೆಹಲಿ ದೊರೆಗಳ ಸದ್ದಡಗಿಸಿತ್ತು. ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಕೊಟ್ಟಿರುವುದು ಪಕ್ಷದ ಪಾಲಿಗೆ ದೊಡ್ಡ ಗೌರವ. ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಸಂಕೇತವೂ ಆಗಿದೆ. ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿರುವವರನ್ನು ಅಧಿಕಾರದಿಂದ ಕೆಳಗಿಳಿಸಲು ಶರದ್ ಪವಾರ್ ನಾಯಕತ್ವದಲ್ಲಿ ಕಹಳೆ ಮೊಳಗಲಿದೆ’ ಎಂದೂ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.