ಹೈದರಾಬಾದ್: ಕಳೆದ ಆರು ದಶಕಗಳಿಂದ ದೇಶದ ಪ್ರಭಾವಿ ನಕ್ಸಲ್ ಮುಖಂಡರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್ಜಿ (ದೇವ್ ಜಿ) ತೆಲಂಗಾಣ ಪೊಲೀಸರಿಗೆ ಶರಣಾಗಿದ್ದಾರೆ.

ದೇವ್ಜಿ ಶರಣಾಗತಿಯನ್ನು ದೇಶದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯಗೊಳ್ಳುವ ನಿರ್ಣಾಯಕ ಹಂತ ಎಂದೇ ವಿಶ್ಲೇಷಿಸಲಾಗಿದೆ.

ನಕ್ಸಲ್ ಮುಖಂಡರಾದ ಮಲ್ಲ ರಾಜಿ ರೆಡ್ಡಿ ಅಲಿಯಾಸ್ ಸಂಗ್ರಾಮ್, ನರಸಿಂಹ ರೆಡ್ಡಿ ಅಲಿಯಾಸ್ ಗಂಗಣ್ಣ ಮತ್ತು ಇತರೆ 16 ಮಂದಿ ನಕ್ಸಲರೊಂದಿಗೆ ದೇವ್ಜಿ ಶರಣಾಗಿರುವುದನ್ನು ತೆಲಂಗಾಣ ಪೊಲೀಸರ ವಿಶೇಷ ಗುಪ್ತಚರ ಘಟಕವು ‘ಪ್ರಜಾವಾಣಿ‘ಗೆ ಖಚಿತಪಡಿಸಿದೆ.

‘ದೇವ್ಜಿ ಮತ್ತು ತಂಡ ಎರಡು ದಿನಗಳ ಹಿಂದೆ ಆಸಿಫಾಬಾದ್ ಕಾಡಿನಿಂದ ಹೊರಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಶೀಘ್ರದಲ್ಲೇ ಶರಣಾಗತಿಯನ್ನು ಅಧಿಕೃತಗೊಳಿಸಿ, ಸಾರ್ವಜನಿಕವಾಗಿ ಪ್ರಕಟಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಬ್ಲ್ಯಾಕ್ ಫಾರೆಸ್–2 ಕಾರ್ಯಾಚರಣೆಗಾಗಿ ತೆಲಂಗಾಣ–ಛತ್ತೀಸಗಢ ಗಡಿಯಲ್ಲಿ ಅಪಾರ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡ ಬೆನ್ನಲ್ಲೇ ದೇವ್ಜಿ ಶರಣಾಗತಿ ನಡೆದಿದೆ.

2010ರಲ್ಲಿ ತಾಡ್ಮೆಟ್ಲಾದಲ್ಲಿ (ದಂತೆವಾಡ) 76 ಮಂದಿ ಸಿಆರ್ಪಿಎಫ್ ಸಿಬ್ಬಂದಿ ಹತ್ಯೆಗೆ ಕಾರಣವಾದ ಗೆರಿಲ್ಲಾ ದಾಳಿಯ ಹಿಂದಿನ ಸೂತ್ರಧಾರ ದೇವ್ಜಿ ಎನ್ನಲಾಗುತ್ತದೆ.

ದೇಶವನ್ನು ನಕ್ಸಲ್ ಮುಕ್ತ ಎಂದು ಘೋಷಿಸಲು ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನಿಗದಿಪಡಿಸಿದೆ.
.ಮಹಾರಾಷ್ಟ್ರ: ಇಬ್ಬರು ನಕ್ಸಲರ ಹತ್ಯೆ, ಭದ್ರತಾ ಸಿಬ್ಬಂದಿ ಹುತಾತ್ಮ.
ತಿಪ್ಪಿರಿ ತಿರುಪತಿ ಯಾರು?

ತೆಲಂಗಾಣದ ಜಗಿತ್ಯಾಲ ಜಿಲ್ಲೆಯ (ಹಿಂದಿನ ಕರೀಂನಗರ) ಕೊರುಟ್ಲಾ ಪಟ್ಟಣದ ಅಂಬೇಡ್ಕರ್ ನಗರ ಕಾಲೋನಿಯಲ್ಲಿ ಪರಿಶಿಷ್ಟ (ಮಾದಿಗ) ಕುಟುಂಬದಲ್ಲಿ ಜನಿಸಿದ ದೇವ್ಜಿ ದೇಶದ ಪ್ರಭಾವಿ ನಕ್ಸಲ್ ಮುಖಂಡರಾಗಿ ಬೆಳೆದಿದ್ದು ಗಮನಾರ್ಹ. ಕೊರುಟ್ಲಾದಲ್ಲಿ ಪ್ರಾಥಮಿಕ ಶಿಕ್ಷಣ ನಂತರ ಪದವಿ ಪೂರ್ಣಗೊಳಿಸಿದ ಅವರು 1980ರ ದಶಕದಲ್ಲಿ ತೀವ್ರಗಾಮಿ ರಾಜಕೀಯಕ್ಕೆ ಧುಮುಕಿದರು. ತೀವ್ರಗಾಮಿ ವಿದ್ಯಾರ್ಥಿ ಒಕ್ಕೂಟದ (ಆರ್ಎಸ್ಯು) ಮುಖಂಡರಾಗಿ ಗುರುತಿಸಿಕೊಂಡು ನಾಲ್ಕು ದಶಕಗಳಲ್ಲಿ ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ಹಂತದವರೆಗೆ ಬೆಳೆದರು. ನಕ್ಸಲ್ ಚಳವಳಿಯಲ್ಲಿ ‘ಮಿಲಿಟರಿ ಮೊದಲು’ ( ಶಸಸ್ತ್ರ ಹೋರಾಟ) ತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು ದೇವ್ಜಿ. ಸಾಂಪ್ರದಾಯಿಕ ನಕ್ಸಲ್ ಸಿದ್ಧಾಂತದ ಬದಲು ಗೆರಿಲ್ಲಾ ತಂತ್ರಗಳಿಗೆ ಆದ್ಯತೆ ನೀಡಿದ್ದರು. ಆಧುನಿಕ ಗೆರಿಲ್ಲಾ ತರಬೇತಿಗಾಗಿ 2009ರಲ್ಲಿ ಕಮ್ಯುನಿಸ್ಟ್ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದರು. ದೇವ್ಜಿ ಅವರ ಪ್ರಭಾವದಿಂದ ಬಸ್ತಾರ್ (ಛತ್ತೀಸಗಢ), ಗಡ್ಚಿರೋಲಿ (ಮಹಾರಾಷ್ಟ್ರ) ಮತ್ತು ಒಡಿಶಾದಲ್ಲಿ ‘ಕಂಪು ಹಾದಿ’ಯು ವಿಸ್ತರಿಸಿತ್ತು.

2025ರಲ್ಲಿ ನಡೆದ ಎನ್ಕೌಂಟರ್ನಲ್ಲಿ ನಂಬಲ ಕೇಶವರಾವ್ ಅಲಿಯಾಸ್ ಬಸವರಾಜು ಮೃತಪಟ್ಟ ನಂತರ, ದೇವ್ಜಿ ಮಾವೋವಾದಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಪರಿಶಿಷ್ಟ ವ್ಯಕ್ತಿ ಅವರು.
.ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 7ಕ್ಕೆ ಇಳಿಕೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.