ಅಲಿಗಢ: ಹೋಳಿ ಹಬ್ಬದ ದಿನ ಮಸೀದಿಗೆ ಹೋಗುವ ಮುಸ್ಲಿಂ ಪುರುಷರು ಟಾರ್ಪಲ್ ಮುಚ್ಚಿಕೊಳ್ಳಲಿ ಎಂದು ಉತ್ತರ ಪ್ರದೇಶ ಸಚಿವ ರಘುರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಹೋಳಿ ಬಣ್ಣ ಮೈಗೆ ಸೋಕಬಾರದು ಎಂದಿದ್ದರೆ ಟಾರ್ಪಲ್ ಹಾಕಿಕೊಂಡು ಶುಕ್ರವಾರದ ಪ್ರಾರ್ಥನೆಗೆ ಹೋಗಲಿ’ ಎಂದು ಸಚಿವರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರಗೊಂದಿಗೆ ಮಾತನಾಡಿದ ಸಿಂಗ್, ‘ಸನಾತನಿಗಳಿಗೆ ಹೋಳಿ ಹಬ್ಬ ವರ್ಷಕ್ಕೆ ಒಂದು ಬಾರಿ ಬರುವ ಹಬ್ಬವಾಗಿದೆ. ಮಸೀದಿಗಳ ಸಮೀಪವಿರುವ ಕೆಲವು ನಿರ್ಬಂಧಿತ ಸ್ಥಳಗಳಲ್ಲಿ ಹೋಳಿ ಆಡಬಾರದು ಎಂದು ನಿರೀಕ್ಷಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಹೋಳಿ ಆಚರಣೆಗೆ ಅಡ್ಡಿಪಡಿಸುವವರಿಗೆ ಮೂರು ಆಯ್ಕೆಗಳಿವೆ; ಜೈಲಿಗೆ ಹೋಗುವುದು, ರಾಜ್ಯ ತೊರೆಯುವುದು ಅಥವಾ ಯಮರಾಜನ ಬಳಿಗೆ ತೆರಳುವುದು’ ಎಂದು ಹೇಳಿದ್ದಾರೆ.

‘ಹೋಳಿ ದಿನ ಮುಸ್ಲಿಮರು ಮನೆಯಲ್ಲಿಯೇ ಹಬ್ಬವನ್ನು ಆಚರಿಸಿಕೊಳ್ಳಲಿ’ ಎಂದು ಸಂಭಾಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಜ್ ಕುಮಾರ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವರಿಂದ ಈ ಹೇಳಿಕೆ ಬಂದಿದೆ.

ಅನುಜ್ ಕುಮಾರ್ ಅವರ ಹೇಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಬೆಂಬಲಿಸಿದ್ದು, ಹೋಳಿ ಹಬ್ಬ ವರ್ಷಕ್ಕೆ ಒಂದೇ ಬಾರಿ ಬರುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.