ಕೋರ್ಟ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳ ಧೋರಣೆ ಸರಿಯಲ್ಲ. ಮಂಗಳವಾರ ಪರೀಕ್ಷೆ ಬರೆದು ಮನೆಗೆ ಹೋದ ವಿದ್ಯಾರ್ಥಿಗಳಿಗೆ ಬುಧವಾರ ಪರೀಕ್ಷೆ ನಡೆಯುವುದಿಲ್ಲ ಎಂದು ಹೇಗೆ ಹೇಳಬೇಕು?
ದೀಪಾ ಮಲ್ಲಿಕಾರ್ಜುನ್, ಶಿಕ್ಷಕಿ
ಸರ್ಕಾರ, ಖಾಸಗಿ ಶಾಲಾ ಆಡಳಿತ ಮಂಡಳಿ ನಡುವಿನ ತಿಕ್ಕಾಟಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸಂತ್ರಸ್ತರಾಗಿದ್ದಾರೆ. ಎಲ್ಲ ಸಿದ್ಧತೆ, ಸಮಯ ವ್ಯರ್ಥವಾಗಿದೆ
ಬಿ.ಸಿದ್ದಬಸಪ್ಪ, ಅಧ್ಯಕ್ಷ, ಪ್ರೌಢಶಾಲಾ ಸಹಶಿಕ್ಷಕರ ಸಂಘ
ಪರೀಕ್ಷೆಯ ದಿಢೀರ್ ಮುಂದೂಡಿಕೆ ಪುಟ್ಟ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅವರು ನಿರಾಸಕ್ತಿ, ಖಿನ್ನತೆಗೂ ಒಳಗಾಗುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಮೊದಲೇ ಸರ್ಕಾರ ಯೋಚಿಸಬೇಕಿತ್ತು