ಪ್ರದೀಪ್ ಈಶ್ವರ್ ಆಪ್ತನ ಮನೆಯಲ್ಲಿ ಶೋಧ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಆಪ್ತ ಜೋಳದ ಕಿಟ್ಟಪ್ಪ ಅವರ ಮನೆಯಲ್ಲಿ ರೆವಿನ್ಯು ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೃಷ್ಣಪ್ಪ ಅಲಿಯಾಸ್ ಜೋಳದ ಕಿಟ್ಟಪ್ಪ ಅವರು ಜೋಳದ ರಫ್ತು ಉದ್ಯಮ ನಡೆಸುತ್ತಿದ್ದಾರೆ. ರಫ್ತು ವ್ಯವಹಾರದಲ್ಲಿ ತೆರಿಗೆ ವಂಚನೆ ಬಗ್ಗೆ ದೂರುಗಳು ಬಂದಿದ್ದು ಅದರ ಆಧಾರದಲ್ಲಿ ಶೋಧ ನಡೆಸಲಾಗಿದೆ. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ದಾಖಲೆಗಳು ರಫ್ತು ಉದ್ಯಮದ ಲೆಕ್ಕಪತ್ರಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.