ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಆಸ್ಪತ್ರೆಗಳಲ್ಲಿ ಅರಿವಳಿಕೆ, ಔಷಧಗಳ ಕೊರತೆ: ಗಾಯಾಳುಗಳ ನರಳಾಟ

Published 10 ನವೆಂಬರ್ 2023, 10:22 IST
Last Updated 10 ನವೆಂಬರ್ 2023, 10:22 IST
ಅಕ್ಷರ ಗಾತ್ರ

ಗಾಜಾ: ‘ಗಾಯಗೊಂಡ ಪುಟ್ಟ ಬಾಲಕಿಯ ತೆಲೆಗೆ ಹೊಲಿಗೆ ಹಾಕುತ್ತಿದ್ದ ವೇಳೆ ನೋವಿನಿಂದ ‘ಮಮ್ಮಿ’ ಎಂದು ಕೂಗುತ್ತಿರುವುದು ಕರುಳು ಕಿವುಚುವಂತಿತ್ತು. ಅದು ನನ್ನ ವೃತ್ತಿ ಜೀವನದ ಅತಿ ಕೆಟ್ಟ ಘಟನೆಯಾಗಿದೆ. ನಾವು ಕೂಡ ಅಸಹಾಯಕರು. ನಮ್ಮ ಬಳಿ ಅರಿವಳಿಕೆ ಖಾಲಿಯಾಗುವ ಹಂತ ತಲುಪಿದೆ, ಉಳಿದ ಔಷಧಗಳೂ ಕೆಲವೇ ದಿನಗಳಿಗಾಗುವಷ್ಟಿವೆ’ ಎನ್ನುತ್ತಾರೆ ಗಾಜಾದಲ್ಲಿನ ಅಲ್‌ ಶಿಫಾ ಆಸ್ಪತ್ರೆಯ ನರ್ಸ್‌ ಅಬು ಇಮಾದ್‌ ಹಸನೇನ್‌.

‘ಕೆಲವೊಮ್ಮೆ ನೋವನ್ನು ತಡೆದುಕೊಳ್ಳಲು ಜನರ ಬಾಯಿಗೆ ಬಾಂಡೇಜ್‌ ಬಟ್ಟೆಗಳನ್ನು ಇರಿಸಿದ್ದೂ ಇದೆ. ನಮಗೂ ಗೊತ್ತು ಸಹಿಸಲಾರದ ನೋವಿರುತ್ತದೆ, ಅದರಲ್ಲೂ ವಯಸ್ಸಿಗೂ ಮೀರಿದ ನೋವನ್ನು ತಡೆದುಕೊಳ್ಳಬೇಕಾದ ಸ್ಥಿತಿ ಗಾಜಾದಲ್ಲಿನ ಮಕ್ಕಳದ್ದು’ ಎನ್ನುತ್ತಾರೆ ನರ್ಸ್‌.

‘ಕೆಲವೊಮ್ಮೆ ಗಾಯಗೊಂಡ ಜನರ ಗುಂಪು ಬಂದಾಗ ನೋವು ನಿವಾರಕವಿಲ್ಲದಿದ್ದರೂ ಎಲ್ಲರನ್ನೂ ಉಪಚರಿಸಲೇಬೇಕಾದ ಸ್ಥಿತಿ ಇರುತ್ತದೆ. ಅದಕ್ಕೆ ಉದಾಹರಣೆ ಎಂದರೆ ಅ.17 ರಂದು 250ಕ್ಕೂ ಹೆಚ್ಚು ಗಾಯಾಗಳುಗಳು ಆಸ್ಪತ್ರೆಗೆ ಬಂದರು. ನಮ್ಮ ಆಸ್ಪತ್ರೆಯಲ್ಲಿ ಇರುವುದು ಕೇವಲ 12 ಶಸ್ತ್ರಚಿಕಿತ್ಸಾ ಕೊಠಡಿ ಮಾತ್ರ. ಒಬ್ಬರ ನಂತರ ಒಬ್ಬರಿಗೆ ಚಿಕಿತ್ಸೆ ನೀಡುವಷ್ಟರಲ್ಲಿ ಅನೇಕ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಸದ್ಯ ಕಡಿಮೆ ಸಾಮರ್ಥ್ಯದ ಅರಿವಳಿಕೆ ಬಳಕೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ’ ಎನ್ನುತ್ತಾರೆ ಅಲ್‌ ಶಿಫಾ ಆಸ್ಪತ್ರೆಯ ನಿರ್ದೇಶಕ ಅಬು ಸೆಲೆಮೆಯಾ.

ಹಮಾಸ್‌ ಮತ್ತು ಇಸ್ರೇಲಿಗರ ನಡುವೆ ಯುದ್ಧ ಆರಂಭವಾಗಿ ಒಂದು ತಿಂಗಳಾಗಿದೆ. ಈಗಾಗಲೇ ಸಾವಿರಾರು ಹೆಚ್ಚು ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT