ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಗಾಜಾದಲ್ಲಿ ದಾಳಿಗೆ ತಾತ್ಕಾಲಿಕ ವಿರಾಮ, ಕದನ ವಿರಾಮ ಇಲ್ಲ: ಇಸ್ರೇಲ್

Published 10 ನವೆಂಬರ್ 2023, 4:42 IST
Last Updated 10 ನವೆಂಬರ್ 2023, 4:42 IST
ಅಕ್ಷರ ಗಾತ್ರ

ಗಾಜಾ‍ ಪಟ್ಟಿ: ಉತ್ತರ ಗಾಜಾದಲ್ಲಿ ನಡೆಸುತ್ತಿರುವ ದಾಳಿಯನ್ನು ತಾತ್ಕಾಲಿಕ ವಿರಾಮ ನೀಡುವುದಾಗಿ ಇಸ್ರೇಲ್ ಹೇಳಿದೆ. ಆದರೆ ಕದನ ವಿರಾಮ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಒಂದು ವೇಳೆ ಕದನ ವಿರಾಮ ಘೋಷಿಸಿದರೆ ಹಮಾಸ್‌ಗೆ ಶರಣಾದಂತೆ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಹಮಾಸ್‌ಗೆ ಶರಣಾದಂತೆ, ಉಗ್ರವಾದಕ್ಕೆ ಶರಣಾದಂತೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡದೆ ಕದನ ವಿರಾಮ ಇಲ್ಲ’ ಎಂದು ನೆತನ್ಯಾಹು ಹೇಳಿದ್ದಾರೆ.

ಅಕ್ಟೋಬರ್‌ 7ರಂದು ಹಮಾಸ್‌ ಮಾಡಿದ ದಾಳಿಯ ಬಳಿಕ, ಇಸ್ರೇಲ್ ಪಡೆಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಿವೆ ಎಂದು ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಗಾಜಾ ‍ಪಟ್ಟಿಯನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ.

‘ಗಾಜಾವನ್ನು ಆಳಲು ಮಾಡಲು ನಾವು ಬಯಸುವುದಿಲ್ಲ. ನಾವು ಅದನ್ನು ವಶಪಡಿಸಿಕೊಳ್ಳುವುದಿಲ್ಲ. ನಾವು ನಮಗೆ ಮತ್ತು ಗಾಜಾಕ್ಕೆ ಉತ್ತಮ ಭವಿಷ್ಯ ನೀಡಲು ಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.

ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 4 ಸಾವಿರಕ್ಕೂ ಅಧಿಕ ಮಕ್ಕಳು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ದಾಳಿಯಿಂದಾಗಿ ನವೆಂಬರ್‌ 4ರ ಬಳಿಕ ಸುಮಾರು 70 ಸಾವಿರ ಮಂದಿ ದಕ್ಷಿಣ ಭಾಗಕ್ಕೆ ಗುಳೆ ಹೋಗಿದ್ದಾರೆ. ಈ ಪೈಕಿ ಬಹು ಮಂದಿ ನಡೆದುಕೊಂಡೇ ಊರು ತೊರೆದಿದ್ದಾರೆ. ಆಂತರಿಕವಾಗಿ 16 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಸಾವಿರಾರು ಮಂದಿ ಯುದ್ಧಭೂಮಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT