ವಾಷಿಂಗ್ಟನ್: ’ಕಮಲಾ ಹ್ಯಾರಿಸ್ ಅವರು ಜೋ ಬೈಡನ್ ಅವರಂತೆ ಹಾಸ್ಯಾಸ್ಪದ ವ್ಯಕ್ತಿ’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅವರನ್ನು ಜೋ ಬೈಡನ್ ಅವರು ಅನುಮೋದಿಸಿದ ಬೆನ್ನಲ್ಲೇ ಟ್ರಂಪ್ ಅವರು ಹೀಗೆ ಹೇಳಿದ್ದಾರೆ.
.ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಬೈಡನ್.
‘ಕಮಲಾ ಹ್ಯಾರಿಸ್ ಅವರು ಬೈಡನ್‌ರಷ್ಟೇ ಹಾಸ್ಯಾಸ್ಪದ ವ್ಯಕ್ತಿ. ನಮ್ಮ ದೇಶದ ಜನರಿಗೆ ಹ್ಯಾರಿಸ್ ಅವರು ಬೈಡನ್‌ಗಿಂತಲೂ ಕೆಟ್ಟದಾಗಿ ಪರಿಣಮಿಸಲಿದ್ದಾರೆ. ಮುಪ್ಪಿನಿಂದ ಬಾಗಿದ ಬೈಡನ್ ಅವರನ್ನು ಸಕ್ರಿಯಗೊಳಿಸುವ ಕೆಲಸ ಹ್ಯಾರಿಸ್‌ರವರದ್ದಾಗಿತ್ತು’ ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ.

‘ಇಬ್ಬರಿಗೂ ತಮ್ಮದೇ ಆದ ದಾಖಲೆಗಳಿವೆ. ಇಬ್ಬರ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬೈಡನ್ ಅವರ ಆಡಳಿತ ವೈಫಲ್ಯತೆಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಕಮಲಾ ಅವರಿಗಿದೆ’ ಎಂದು ಟ್ರಂಪ್ ನುಡಿದಿದ್ದಾರೆ.
.ಅಮೆರಿಕ ಚುನಾವಣೆ: ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ.
‘ಜೋ ಬೈಡನ್ ಅವರು ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲ ದೇಶದ ಮಹಿಳೆಯರು ಹಾಗೂ ಮಕ್ಕಳ ಸುರಕ್ಷೆತೆಗೂ ಅಪಾಯಕಾರಿಯಾಗಿದ್ದರು. ಕಮಲಾ ಹ್ಯಾರಿಸ್‌ಗೆ ಒಂದು ಸರಳ ಪ್ರಶ್ನೆ, ಜೋ ಬೈಡನ್ ಅವರು, ಹದಗೆಡುತ್ತಿರುವ ಆರೋಗ್ಯದ ಸ್ಥಿತಿಯಿಂದಾಗಿ ಅಭಿಯಾನದಿಂದ ಹಿಂದೆ ಸರಿದಿದ್ದಾರೆ ಎಂದು ಹ್ಯಾರಿಸ್ ಅವರಿಗೆ ತಿಳಿದಿದೆ. ಈ ಪರಿಸ್ಥಿತಿಯಲ್ಲಿ ಆರು ತಿಂಗಳ ಕಾಲ ಅಮೆರಿಕದ ಜನರು ಸುರಕ್ಷಿತರೇ? ನವೆಂಬರ್ 5ರಂದು ದೇಶವನ್ನು ರಕ್ಷಿಸಲು ಚುನಾವಣೆ ನಡೆಯಲಿದೆ. ಮತ್ತೊಮ್ಮೆ ಅಮೆರಿಕವನ್ನು ಶ್ರೇಷ್ಠವಾಗಿಸೋಣ’ ಎಂದು ಟ್ರಂಪ್ ಅವರ ಪ್ರಚಾರಕರಾದ ಕ್ರಿಸ್ ಲಾಸಿವಿಟಾ ಮತ್ತು ಸೂಸಿ ವೈಲ್ಸೊ ಪ್ರಕಟಣೆಯಲ್ಲಿ ಹೇಳಿದ್ದಾರೆ.
.ಅಮೆರಿಕ | ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಅರ್ಹರು ಎಂದ ಬೈಡನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.