ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

Published : 17 ನವೆಂಬರ್ 2025, 5:25 IST
Last Updated : 17 ನವೆಂಬರ್ 2025, 15:40 IST
ಫಾಲೋ ಮಾಡಿ
Comments
ಒಂದೇ ಕುಟುಂಬದ 18 ಮಂದಿ
ಹೈದರಾಬಾದ್‌ನ ವಿದ್ಯಾನಗರದಲ್ಲಿ ನೆಲಸಿರುವ ಒಂದೇ ಕುಟುಂಬದ ಮೂರು ತಲೆಮಾರುಗಳಿಗೆ ಸೇರಿದ 18 ಮಂದಿ ಮೃತರಲ್ಲಿ ಸೇರಿದ್ದಾರೆ. ಇವರಲ್ಲಿ 9 ಮಕ್ಕಳೂ ಇದ್ದಾರೆ. 70 ವರ್ಷದ ಸಲಾಹುದ್ದೀನ್‌ ಶೇಖ್‌ ಅವರು ಪತ್ನಿ ಪುತ್ರರು  ಸೊಸೆಯಂದಿರು ಪುತ್ರಿಯರು ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಉಮ್ರಾಗೆ ತೆರಳಿದ್ದರು. ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ ಸಲಾಹುದ್ದೀನ್‌ ಅವರಿಗೆ ತಲಾ ಮೂವರು ಪುತ್ರಿಯರು ಮತ್ತು ಪುತ್ರರು ಇದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದರು. ಅವರ ಒಬ್ಬ ಪುತ್ರ ಅಮೆರಿಕದಲ್ಲಿದ್ದು ಇವರೊಂದಿಗೆ ಉಮ್ರಾಗೆ ತೆರಳಿಲ್ಲ. ಕುಟುಂಬದ ಇತರ ಎಲ್ಲರೂ ಸೌದಿಗೆ ಪ್ರಯಾಣಿಸಿದ್ದರು.
ಎಲ್ಲ ನೆರವು: ಪ್ರಧಾನಿ
ಮದೀನಾದಲ್ಲಿ ನಡೆದ ಅಪಘಾತದಲ್ಲಿ ಭಾರತೀಯರು ಮೃತಪಟ್ಟ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಜೆದ್ದಾದಲ್ಲಿರುವ ಕಾನ್ಸುಲೇಟ್ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುತ್ತಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ’ ಎಂದಿದ್ದಾರೆ.
ಒಬ್ಬರು ಹುಬ್ಬಳ್ಳಿ ವಿಳಾಸದವರು
‘ಬಸ್‌ನಲ್ಲಿದ್ದ 46 ಮಂದಿಯಲ್ಲಿ 43 ಮಂದಿ ಹೈದರಾಬಾದ್‌ನವರಾಗಿದ್ದು ಇಬ್ಬರು ಸೈಬರಾಬಾದ್‌ನವರು. ಇನ್ನೊಬ್ಬರು ಕರ್ನಾಟಕದ ಹುಬ್ಬಳ್ಳಿಯ ವಿಳಾಸ ಹೊಂದಿದ್ದಾರೆ’ ಎಂದು ಜಂಟಿ ಪೊಲೀಸ್‌ ಆಯುಕ್ತ ತಫ್ಸೀರ್‌ ಇಕ್ಬಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT