ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯದ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಮತ್ತೆ 13 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ, ಹಿಂಸಾಚಾರಕ್ಕೆ 10 ದಿನಗಳಲ್ಲಿ ಒಟ್ಟು 124 ಜನರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ದಿನಗಳಲ್ಲಿ ಇಬ್ಬರು ಸುನ್ನಿ ಹಾಗೂ 11 ಮಂದಿ ಶಿಯಾ ಸಮುದಾಯದವರು ಮೃತಪಟ್ಟಿದ್ದಾರೆ. ಶನಿವಾರ ಮುಂಜಾನೆ ನಡೆದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಇದೆ. ಶಾಂತಿ ಕಾಪಾಡುವಂತೆ ಎರಡೂ ಪಂಗಡಗಳ ನಡುವಿನ ಒಪ್ಪಂದವನ್ನು 10 ದಿನಗಳವರೆಗೆ ವಿಸ್ತರಿಸಲಾಗಿದ್ದರೂ ಹಿಂಸಾಚಾರ ಮುಂದುವರಿದಿದೆ’ ಎಂದು ಹೇಳಿದರು.

ಕಳೆದ ಗುರುವಾರ ಪರಾಚಿನಾರ್ನಲ್ಲಿ ಶಿಯಾ ಸಮುದಾಯದವರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ನಡೆದ ದಾಳಿಯಲ್ಲಿ 40 ಮಂದಿ ಸಾವಿಗೀಡಾಗಿದ್ದರು. ಅದರ ಬೆನ್ನಲ್ಲೇ ಕುರ್ರಂನಲ್ಲಿ ಬುಡಕಟ್ಟು ಪಂಗಡಗಳ ನಡುವೆ ಘರ್ಷಣೆ ಆರಂಭವಾಗಿದೆ.

ಪಾಕಿಸ್ತಾನದಲ್ಲಿ ಸುನ್ನಿ ಸಮುದಾಯದ ಜನರು ಬಹುಸಂಖ್ಯಾತರಾಗಿದ್ದು, ಕುರ್ರಂನಲ್ಲಿ ಶಿಯಾ ಜನಸಂಖ್ಯೆ ಅಧಿಕವಾಗಿದೆ. ಎರಡೂ ಸಮುದಾಯಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.