ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nepal Earthquake: 157 ಸಾವು; ಬಿಹಾರ, ಜಾರ್ಖಂಡ್‌, ದೆಹಲಿಯಲ್ಲಿ ಕಂಪಿಸಿದ ಭೂಮಿ

Published 4 ನವೆಂಬರ್ 2023, 2:15 IST
Last Updated 4 ನವೆಂಬರ್ 2023, 5:45 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಪಶ್ಚಿಮ ಭಾಗದಲ್ಲಿ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ 157 ಜನರು ಮೃತಪಟ್ಟು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಭೂಕಂಪ ಉಂಟಾದ ಪ್ರದೇಶದಲ್ಲಿ ನೂರಾರು ಮನೆ, ಕಟ್ಟಡಗಳು ನೆಲಸಮವಾಗಿವೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಜಾಜರ್‌ಕೋಟ್ ಮತ್ತು ರುಕುಂ ಜಿಲ್ಲೆಗಳು ಹೆಚ್ಚು ಹಾನಿಗೆ ಒಳಗಾಗಿವೆ.

ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಅವಿರತ ಶ್ರಮ ಪಡುತ್ತಿವೆ. ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ. 

ಕಠ್ಮಂಡು, ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ನವದೆಹಲಿಯಲ್ಲಿಯೂ ಭೂಕಂಪದ ಪರಿಣಾಮವಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. 

ಶುಕ್ರವಾರ ರಾತ್ರಿ ಭೂಕಂಪವಾಗಿದ್ದರೂ ರಕ್ಷಣಾ ಕಾರ್ಯಕರ್ತರು ಅಲ್ಲಿಗೆ ಶನಿವಾರ ಬೆಳಿಗ್ಗೆಯಷ್ಟೇ ತಲುಪಿದ್ದಾರೆ. ಹಾಗಾಗಿ, ಸಾವಿನ ಸಂಖ್ಯೆಯು ಇನ್ನಷ್ಟು ಹೆಚ್ಚಬಹುದು ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಭೂಕಂಪ ಉಂಟಾದ ಸ್ಥಳವು ಅತ್ಯಂತ ದುರ್ಗಮವಾದುದಾಗಿದೆ.

ಬಿಹಾರ, ಜಾರ್ಖಂಡ್‌, ದೆಹಲಿಯಲ್ಲೂ ಕಂಪಿಸಿದ ಭೂಮಿ

ಪಟ್ನಾ/ರಾಂಚಿ: ಬಿಹಾರದ ಮತ್ತು ಜಾರ್ಖಂಡ್‌ನ ಹಲವು ಜಿಲ್ಲೆಗಳಲ್ಲೂ ಶುಕ್ರವಾರ ರಾತ್ರಿ ಭೂಕಂಪನ ಸಂಭವಿಸಿದೆ.

ಜಾರ್ಖಂಡ್‌ನ ಕೆಲವು ಜಿಲ್ಲೆಗಳಲ್ಲಿ ಲಘು ಕಂಪನದ ಅನುಭವವಾಗಿದ್ದರೆ, ಬಿಹಾರದ  ಪೂರ್ವ ಚಂಪಾರಣ್‌, ಪಟ್ನಾ, ದರ್ಬಾಂಗ, ಮುಜಾಫ್ಫರ್‌ಪುರ ಸೇರಿದಂತೆ ಭಾರತ– ನೇಪಾಳ ಗಡಿಯ ಜಿಲ್ಲೆಗಳಲ್ಲಿ ತೀವ್ರ ಭೂಕಂಪನ ಉಂಟಾಗಿದೆ. ಆದರೆ ಎರಡೂ ರಾಜ್ಯಗಳಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.

ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT