ಕಟಕ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್ನಲ್ಲಿ 100ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು, ಭಾರತದ ಬಿಗಿ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ, ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

4ನೇ ವಿಕೆಟ್ಗೆ ಮೈದಾನಕ್ಕೆ ಬಂದ ಸ್ಪೋಟಕ ಆಟಗಾರ ಬ್ರೆವಿಸ್, ಕೆಲ ಕಾಲ ಮೈದಾನದಲ್ಲಿ ಉತ್ತಮ ಪ್ರತಿರೋಧ ತೋರಿದರು.

ಹರಿಣಗಳ ಇನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಬ್ರೆವಿಸ್ (22 ರನ್, 14 ಎಸೆತ), 10ನೇ ಓವರ್ ಎರಡನೇ ಎಸೆತದಲ್ಲಿ ಜಸ್ಪ್ರೀತ್ ಬೂಮ್ರಾ ಬೌಲಿಂಗ್ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದರು. ಇದು ಚುಟುಕು ಕ್ರಿಕೆಟ್ನಲ್ಲಿ ಬೂಮ್ರಾ ಅವರ ನೂರನೇ ವಿಕೆಟ್ ಆಗಿದೆ.

ತಕ್ಷಣವೇ ಬ್ರೆವಿಸ್ ಮೈದಾನ ತೊರೆಯಲು ಮುಂದಾದಾಗ, ಅಂಪೈರ್ ನೋ ಬಾಲ್ ಪರಿಶೀಲಿಸಲು ಮುಂದಾದರು. ಕ್ಷಣ ಕಾಲ ಕ್ರೀಸ್ನಲ್ಲಿದ್ದ ಬ್ರೆವಿಸ್, ಮೂರನೇ ಅಂಪೈರ್ ‘ಫೇರ್ ಡೆಲಿವರಿ’ ಎನ್ನುತ್ತಿದ್ದಂತೆಯೇ, ಅವಸರದಲ್ಲಿ ಮೈದಾನ ತೊರೆದು ಪೆವಿಲಿಯನ್ ಕಡೆ ಸಾಗಿದರು.

ಆದರೆ, ವಿಕೆಟ್ನ ಇನ್ನೊಂದು ಭಾಗದಿಂದ ನೋಡುವಾಗ ಬೂಮ್ರಾ ಪಾದವು ಕೂದಲೆಳೆಯ ಅಂತರದಲ್ಲಿ ಗೆರೆಯ ಹೊರಗಿರುವಂತೆ ಕಾಣುತ್ತದೆ. ಆದರೆ, ಅಂಪೈರ್ ಬೇರೆ ಬೇರೆ ಕಡೆಯಿಂದ ನೋಡದೇ, ಕೆಟ್ಟ ತೀರ್ಪು ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
.IND vs SA T20 | ಕ್ರಿಕೆಟ್ನ ಮೂರು ಮಾದರಿಯಲ್ಲೂ ಬೂಮ್ರಾ ‘ಶತಕ’ ಸಾಧನೆ.
ಅಂತರರಾಷ್ಟ್ರೀಯ ಕ್ರಿಕೆಟ್ನ ಹೊಸ ನಿಯಮದ ಪ್ರಕಾರ, ನೋ ಬಾಲ್ ತೀರ್ಪನ್ನು ಮೂರನೇ ಅಂಪೈರ್ ನೀಡಬೇಕು. ನೋ ಬಾಲ್ ತೀರ್ಪು ನೀಡುವಾಗ, ಗೆರೆಯ ಒಂದು ಕಡೆಯಲ್ಲಿ ನಾನ್ ಸ್ಟ್ರೈಕರ್ ಬ್ಯಾಟರ್ ಹಾಗೂ ಮತ್ತೊಂದು ಕಡೆಯಲ್ಲಿ ಫೀಲ್ಡಿಂಗ್ಗೆ ಇದ್ದ ಸೂರ್ಯಕುಮಾರ್ ಯಾದವ್ ಕ್ಯಾಮೆರಾಗೆ ಅಡ್ಡ ಇದ್ದಿದ್ದರಿಂದ, ಮೂರನೇ ಅಂಪೈರ್ ಅವಸರದ ನಿರ್ಧಾರಕ್ಕೆ ಬಂದಿದ್ದಾರೆ.

ತಂಡದ ಮೊತ್ತವು 68 ರನ್ ಇದ್ದಾಗ, ಬ್ರೆವಿಸ್ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾವು 74 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತವು 101 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
.IND vs SA Highlights: ದ.ಆಫ್ರಿಕಾ ಕಳಪೆ ಸಾಧನೆ; ಭಾರತ ಗೆಲುವಿನ ಶುಭಾರಂಭ.IND vs SA T20 | ಹಾರ್ದಿಕ್ ಆಲ್ರೌಂಡ್ ಆಟಕ್ಕೆ ಜಯದ ಮೆರುಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.