ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 11,000 ರನ್ಗಳ ಸಾಧನೆ ಮಾಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಗುರುವಾರ) ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ (222 ಇನಿಂಗ್ಸ್) ಬಳಿಕ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ 11,000 ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

ರೋಹಿತ್ ತಮ್ಮ 261ನೇ ಇನಿಂಗ್ಸ್ನಲ್ಲಿ ಈ ದಾಖಲೆ ಬರೆದಿದ್ದಾರೆ. ಆ ಮೂಲಕ ದಿಗ್ಗಜರಾದ ಸಚಿನ್ ತೆಂಡೂಲ್ಕರ್ (276), ರಿಕಿ ಪಾಂಟಿಂಗ್ (286) ಹಾಗೂ ಸೌರವ್ ಗಂಗೂಲಿ (288) ದಾಖಲೆಯನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ನಲ್ಲಿ 11,000 ರನ್ ಮೈಲಿಗಲ್ಲು ತಲುಪಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ. ಒಟ್ಟಾರೆಯಾಗಿ ವಿಶ್ವದ 10ನೇ ಬ್ಯಾಟರ್ ಆಗಿದ್ದಾರೆ. ಇದರೊಂದಿಗೆ ಸಾರ್ವಕಾಲಿಕ ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಸಾಧಕರು:

ಸಚಿನ್ ತೆಂಡೂಲ್ಕರ್: 18,426

ಕುಮಾರ ಸಂಗಕ್ಕರ: 14,234

ವಿರಾಟ್ ಕೊಹ್ಲಿ: 13,963

ರಿಕಿ ಪಾಂಟಿಂಗ್: 13,704

ಸನತ್ ಜಯಸೂರ್ಯ: 13,430

ಮಹೇಲಾ ಜಯವರ್ಧನೆ: 12,650

ಇಂಜಮಾಮ್ ಉಲ್ ಹಕ್: 11,739

ಜಾಕ್ ಕಾಲಿಸ್: 11,579

ಸೌರವ್ ಗಂಗೂಲಿ: 11,363

ರೋಹಿತ್ ಶರ್ಮಾ: 11,000

.Champions Trophy | IND vs BAN: ಶಮಿ ಬಿರುಗಾಳಿ; ಗಿಲ್ ತಂಗಾಳಿ: ಭಾರತ ಶುಭಾರಂಭ.Champions Trophy: ಮೊಹಮ್ಮದ್ ಶಮಿ 200 ವಿಕೆಟ್ ಸಾಧನೆ, ವಿಶಿಷ್ಟ ದಾಖಲೆ.ಸುಲಭ ಕ್ಯಾಚ್ ಕೈಚೆಲ್ಲಿದ ರೋಹಿತ್; ಅಕ್ಷರ್ಗೆ ಕೈತಪ್ಪಿದ ಹ್ಯಾಟ್ರಿಕ್!.ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ಗೆ ಹಿನ್ನಡೆ; ಸ್ಟಾರ್ ಆಟಗಾರ ಗಾಯಾಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.