ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.

ಭಾರತ ನೀಡಿದ 264 ರನ್ಗಳನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ 46.2 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಮ್ಯಾಥ್ಯೂ ಶಾರ್ಟ್ (74) ಹಾಗೂ ಕೂಪೆದ ಕೊನೊಲ್ಲಿ (61) ಅವರು ಅರ್ಧಶತಕ ಬಾರಿಸಿದರು. ಟ್ರಾವಿಸ್ ಹೆಡ್ (28), ಮ್ಯಾಥ್ಯೂ ರೆನ್ಶೋ (30), ಮಿಚೆಲ್ ಓವೆನ್ (36) ಗೆಲುವಿನಲ್ಲಿ ಉಪಯುಕ್ತ ಕಾಣಿಕೆ ನೀಡಿದರು.

ಭಾರತದ ಪರ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಕಿತ್ತರು. ಉಳಿದೆರಡು ವಿಕೆಟ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ಪಾಲಾಯಿತು.
.Cricket | ಅಡಿಲೇಡ್ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?.
ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಮಿಚೇಲ್ ಮಾರ್ಷ್, ಬೌಲಿಂಗ್ ಆಯ್ದುಕೊಂಡರು. ಕ್ರೀಸ್ಗಿಳಿದ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಾಯಕ ಶುಭಮನ್ ಗಿಲ್ (9) ಹಾಗೂ ವಿರಾಟ್ ಕೊಹ್ಲಿ (0) ಒಂದೇ ಓವರ್ನಲ್ಲಿ ಔಟಾಗುವುದೊಂದಿಗೆ ಆರಂಭಿಕ ಆಘಾತ ಎದುರಾಯಿತು.

ಒತ್ತಡದ ಈ ಹೊತ್ತಿನಲ್ಲಿ ಜೊತೆಯಾದ ರೋಹಿತ್ ಮತ್ತು ಶ್ರೇಯಸ್ ಭಾರತದ ಇನಿಂಗ್ಸ್ಗೆ ಬಲತುಂಬಿದರು. ಆರಂಭದಲ್ಲಿ ತಿಣುಕಾಡುತ್ತಿದ್ದ ರೋಹಿತ್ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಈ ಜೋಡಿ 3ನೇ ವಿಕೆಟ್ ಪಾಲುದಾರಿಕೆಯಲ್ಲಿ 118 ರನ್ ಕಲೆಹಾಕುವುದರೊಂದಿಗೆ ವಿಕೆಟ್ ಕುಸಿತಕ್ಕೆ ತಡೆಯೊಡ್ಡಿತು.

97 ಎಸೆತಗಳನ್ನು ಎದುರಿಸಿದ ರೋಹಿತ್, 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 73 ರನ್ ಗಳಿಸಿ ಔಟಾದರೆ, ಅಯ್ಯರ್ ಆಟ 61 ರನ್ಗೆ ಕೊನೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ ಅಕ್ಷರ್ ಪಟೇಲ್, 44 ರನ್ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹರ್ಷಿತ್ ರಾಣ (24) ಅವರೂ ಉಪಯುಕ್ತ ಆಟವಾಡಿದರು. ಹೀಗಾಗಿ, ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 264 ರನ್ ಕಲೆಹಾಕಲು ಸಾಧ್ಯವಾಯಿತು.

ಆಸಿಸ್ ಪರ ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದರೆ, ಷೇವಿಯರ್ ಬರ್ಟ್ಲೆಟ್ ಎರಡು ವಿಕೆಟ್ ಉರುಳಿಸಿದರು. ಮಿಚೇಲ್ ಸ್ಟಾರ್ಕ್ ಎರಡು ವಿಕೆಟ್ ಕಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.