ಬೆಂಗಳೂರು: ಮುಂದಿನ ವರ್ಷ ಮಾರ್ಚ್ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ದುಬೈನಲ್ಲಿ ಇಂದು ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಇತ್ತೀಚೆಗಷ್ಟೇ ಮುಗಿದ ಏಕದಿನ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಒಲವು ತೋರಿವೆ. ಅದರಂತೆ ಆಸಿಸ್ನ ಪ್ರಮುಖ ವೇಗಿಗಳಾದ ಮಿಚೇಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರು ₹ 20 ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು ಎನಿಸಿಕೊಂಡಿದ್ದಾರೆ.
ಈ ಇಬ್ಬರಲ್ಲದೆ ನ್ಯೂಜಿಲೆಂಡ್ನ ಡೆರಿಲ್ ಮಿಚೇಲ್, ಭಾರತದ ಹರ್ಷಲ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ನ ಅಲ್ಜಾರಿ ಜೋಸೆಫ್ ಮಾತ್ರವೇ ಈ ಬಾರಿಯ ಹರಾಜಿನಲ್ಲಿ (ಸಂಜೆ 4 ಗಂಟೆ ವರೆಗಿನ ಮಾಹಿತಿ ಪ್ರಕಾರ) ₹ 10 ಕೋಟಿಗಿಂತ ಹೆಚ್ಚಿನ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ.