ಮೊಹಾಲಿ: ದೇವದತ್ತ ಪಡಿಕ್ಕಲ್ ಅವರು ಭಾನುವಾರ ದಾಖಲಿಸಿದ ಶತಕವು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹುಕಾಲ ಸಿಹಿನೆನಪಾಗಿ ಉಳಿಯಲಿದೆ. ಏಕೆಂದರೆ; ಅವರ ಶತಕದ ಬಲದಿಂದ ಕರ್ನಾಟಕವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ತಂಡದ ನಾಯಕನಾಗಿ, ಕ್ಲಿಷ್ಟ ಗುರಿಯನ್ನು ಬೆನ್ನಟ್ಟಲು ಆರಂಭಿಕ ಬ್ಯಾಟರ್ ಆಗಿ ಮತ್ತು ಫಿನಿಷರ್ ಪಾತ್ರವನ್ನೂ ನಿರ್ವಹಿಸಿದ ದೇವದತ್ತ (ಅಜೇಯ 120; 85ಎ, 4X6, 6X5) ಅವರಿಂದಾಗಿ ಕರ್ನಾಟಕವು ಎಲೀಟ್ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಪಂಜಾಬ್ ಎದುರು 5 ವಿಕೆಟ್ಗಳಿಂದ ಗೆದ್ದಿತು. ಒಟ್ಟು 27 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಫೆ. 6ರಿಂದ 10ರವರೆಗೆ ನಡೆಯಲಿರುವ ಕ್ವಾರ್ಟರ್ಫೈನಲ್ನಲ್ಲಿ 42 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ.

ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ಪಂಜಾಬ್ ನೀಡಿದ್ದ 250 ರನ್ಗಳ ಗೆಲುವಿನ ಗುರಿಯನ್ನು ಕರ್ನಾಟಕ ಬೆನ್ನಟ್ಟಿತ್ತು. ಓವರ್ಗಳ ಸಂಖ್ಯೆ ಮತ್ತು ಸಮಯದ ಮಿತಿಯನ್ನು ನೋಡಿದಾಗ ಈ ಗುರಿಯು ಕಠಿಣ ಎಂದು ಮೇಲ್ನೋಟಕ್ಕೆ ಅನಿಸಿತ್ತು. ಪಡಿಕ್ಕಲ್ ಪಡೆಯು 27.3 ಓವರ್ಗಳಲ್ಲಿ 5 ವಿಕೆಟ್ಗಳಿಗೆ 252 ರನ್ ಗಳಿಸಿತು.

ಚಹಾ ವಿರಾಮಕ್ಕೆ ಸುಮಾರು ಅರ್ಧಗಂಟೆಗೂ ಮುನ್ನ ಕರ್ನಾಟಕ ಇನಿಂಗ್ಸ್ ಆರಂಭವಾಯಿತು. ಅಂದಾಜು 40 ಓವರ್ಗಳಲ್ಲಿ ಅವರು ಈ ಗುರಿಯನ್ನು ಮುಟ್ಟಬೇಕಿತ್ತು. ನಾಲ್ಕನೇ ದಿನದ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವಂತಿತ್ತು. ಕೆಳಹಂತದಲ್ಲಿ ಪುಟಿದೆದ್ದು ತಿರುವು ಪಡೆಯುತ್ತಿದ್ದ ಎಸೆತಗಳನ್ನು ಎದುರಿಸುವುದು ಸವಾಲಾಗಿತ್ತು. ಆದರೆ ದೇವದತ್ತ ದಿಟ್ಟ ನಿರ್ಧಾರದ ಮುಂದೆ ಸವಾಲು ಸೋತಿತು. ತಮ್ಮ ಕಳೆದ ಮೂರು ಇನಿಂಗ್ಸ್ಗಳಲ್ಲಿಯೂ ವೈಫಲ್ಯ ಅನುಭವಿಸಿದ್ದ ದೇವದತ್ತ ಇಲ್ಲಿ ಅಮೋಘವಾಗಿ ಆಡಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಎಂಟನೇ ಶತಕ ದಾಖಲಿಸಿದರು.

ಅವರು ಆರಂಭದಿಂದಲೇ ಟಿ20 ಮಾದರಿಯ ಬೀಸಾಟವಾಡಿದರು. 13 ರನ್ ಗಳಿಸಿದ ರಾಹುಲ್ ಮೂರನೇ ಓವರ್ನಲ್ಲಿ ಅನ್ಮೋಲ್ಜೀತ್ ಸಿಂಗ್ಗೆ ಕ್ಯಾಚಿತ್ತರು. ಕ್ರೀಸ್ಗೆ ಬಂದ ‘ನಿಕಟಪೂರ್ವ ನಾಯಕ’ ಮಯಂಕ್ ಅಗರವಾಲ್ ಅವರು ದೇವದತ್ತಗಿಂತ ವೇಗವಾಗಿ ರನ್ ಗಳಿಸಿದರು. ಇಬ್ಬರ ಭರಾಟೆಯಿಂದಾಗಿ ಚಹಾ ವಿರಾಮಕ್ಕೆ ತಂಡವು 8 ಓವರ್ಗಳಲ್ಲಿ 1 ವಿಕೆಟ್ಗೆ 52 ರನ್ ಗಳಿಸಿತ್ತು.

ಶನಿವಾರದಂತೆ ಮಂದಬೆಳಕಿನ ಸಮಸ್ಯೆ ಇರಲಿಲ್ಲ. ಸಂಜೆಯಾದರೂ ಚೆಲ್ಲಿದ್ದ ಚೆಂದದ ಬೆಳಕಿನಲ್ಲಿ ದೇವದತ್ತ ಮತ್ತು ಮಯಂಕ್ ಆಟ ರಂಗೇರಿತು. 15ನೇ ಓವರ್ನಲ್ಲಿ ಮಯಂಕ್ (53; 36ಎ, 4X6, 6X1) ಆವರು ಇಮಾನ್ಜೋತ್ ಸಿಂಗ್ ಚಾಹಲ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆದಾಗ ತಂಡದ ಖಾತೆಯಲ್ಲಿ 130 ರನ್ಗಳಿದ್ದವು. ಮಯಂಕ್ ಮತ್ತು ದೇವದತ್ತ ಎರಡನೇ ವಿಕೆಟ್ ಜೊತೆಯಾಟದಲ್ಲಿ 113 (72ಎ) ರನ್ ಸೇರಿಸಿದರು. ಅನೀಶ್ ಕೆ.ವಿ. ಮತ್ತು ಸ್ಮರಣ್ ರವಿಚಂದ್ರನ್ ಅವರು ತಲಾ 1 ರನ್ ಗಳಿಸಿ ಔಟಾದಾಗ ಕರ್ನಾಟಕ ಬಳಗದಲ್ಲಿ ಒತ್ತಡದ ಛಾಯೆ ಆವರಿಸಿತು.

ಮತ್ತೊಮ್ಮೆ ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾದರು. ಸ್ವೀಪ್, ಡ್ರೈವ್ ಮೂಲಕ ಕ್ಲೋಸ್ ಇನ್ ಫೀಲ್ಡರ್ಗಳನ್ನು ವಂಚಿಸಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ಇನ್ನೊಂದು ಕಡೆ 25 ವರ್ಷದ ಎಡಗೈ ಬ್ಯಾಟರ್ ದೇವದತ್ತ ಕೂಡ ಬೌಲರ್ಗಳಿಗೆ ಬಿಸಿ ಮುಟ್ಟಿಸಿದರು. ತಂಡವು ಇನ್ನೂರರ ಗಡಿ ದಾಟಿದಾಗ ಶ್ರೇಯಸ್ ಅವರು ಅನ್ಮೋಲ್ಜೀತ್ ಸಿಂಗ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿ ಬೀಟ್ ಆದರು. ವಿಕೆಟ್ಕೀಪರ್ ಅನ್ಮೋಲ್ ಮಲ್ಹೋತ್ರಾ ಸ್ಟಂಪಿಂಗ್ ಮಾಡಿದರು. ಶ್ರೇಯಸ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದರು. ಒಟ್ಟು ಆರು ವಿಕೆಟ್ ಕೂಡ ಗಳಿಸಿದ್ದರು.

ಈ ನಡುವೆ ಪಂಜಾಬ್ ತಂಡದ ಕೆಲವು ಫೀಲ್ಡರ್ಗಳು ಸ್ನಾಯುಸೆಳೆತದ ನೆಪವೊಡ್ಡಿ ಪದೇ ಪದೇ ತಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತಿದ್ದರು. ಕಾಲಹರಣದ ಪ್ರಹಸನದಂತೆ ಕಂಡ ಈ ನಡೆಗೆ ಒಂದು ಹಂತದಲ್ಲಿ ಅಂಪೈರ್ಗಳು ಎಚ್ಚರಿಕೆ ಕೂಡ ನೀಡಿದರು. ಆದರೆ ಇದಾವುದೂ ದೇವದತ್ತ ಏಕಾಗ್ರತೆಗೆ ಭಂಗ ತರಲಿಲ್ಲ.

ಕ್ರೀಸ್ಗೆ ಬಂದ ವಿದ್ಯಾಧರ್ ಪಾಟೀಲ (ಅಜೇಯ 14) ತಮ್ಮ ನಾಯಕನ ಆಟಕ್ಕೆ ಸಾಥ್ ನೀಡಿದರು. ಇಬ್ಬರೂ ಸೇರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಡ್ರೆಸಿಂಗ್ ರೂಮ್ನಲ್ಲಿದ್ದ ಕೋಚ್ ಯರೇಗೌಡ, ನೆರವು ಸಿಬ್ಬಂದಿ ಮತ್ತು ಸಹ ಆಟಗಾರರು ಓಡಿಬಂದು ದೇವದತ್ತ ಅವರನ್ನು ಆಲಂಗಿಸಿ ಅಭಿನಂದಿಸಿದರು.
.ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ.ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ ‘ಶ್ರೇಯ’.
ಶತಕವಂಚಿತ ಉದಯ್

ಮೂರನೇ ದಿನದಾಟದ ಅಂತ್ಯಕ್ಕೆ ಪಂಜಾಬ್ ತಂಡವು ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ಗಳಿಗೆ 119 ರನ್ ಗಳಿಸಿತ್ತು. ಒಟ್ಟು 112 ರನ್ಗಳ ಮುನ್ನಡೆ ಸಾಧಿಸಿತ್ತು. ಅರ್ಧಶತಕ ಗಳಿಸಿದ್ದ ನಾಯಕ ಉದಯ್ ಸಹರನ್ ಮತ್ತು ಅನ್ಮೋಲ್ಪ್ರೀತ್ ಸಿಂಗ್ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದರು.

ಕೊನೆಯ ದಿನ ಬೆಳಿಗ್ಗೆಯ ಅವಧಿಯ ಬಹುತೇಕ ಸಮಯ ಉದಯ್ ಬ್ಯಾಟಿಂಗ್ ಮಾಡಿದರು. ಆದರೆ 93 ರನ್ ಗಳಿಸಿದ್ದ ಉದಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಶಿಖರ್ ಶೆಟ್ಟಿ ಯಶಸ್ವಿಯಾದರು. ಅನ್ಮೋಲ್ಪ್ರೀತ್ ಸಿಂಗ್ (44ರನ್) ಮತ್ತು ಹರಪ್ರೀತ್ ಬ್ರಾರ್ (29 ರನ್) ಅವರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳಿಗೆ ದೊಡ್ಡ ಇನಿಂಗ್ಸ್ ಆಡಲು ಬೌಲರ್ಗಳು ಬಿಡಲಿಲ್ಲ. ಇದರಿಂದಾಗಿ ತಂಡವು 101 ಓವರ್ಗಳಲ್ಲಿ 256 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ಪಂಜಾಬ್: 92 ಓವರ್ಗಳಲ್ಲಿ 309

ಕರ್ನಾಟಕ:110.2 ಓವರ್ಗಳಲ್ಲಿ 316.

ಎರಡನೇ ಇನಿಂಗ್ಸ್

ಪಂಜಾಬ್: 101 ಓವರ್ಗಳಲ್ಲಿ 256 (ಉದಯ್ ಸಹರನ್ 93, ಅನ್ಮೋಲ್ಪ್ರೀತ್ ಸಿಂಗ್ 44, ಹರಪ್ರೀತ್ ಬ್ರಾರ್ 29, ಶಿಖರ್ ಶೆಟ್ಟಿ 82ಕ್ಕೆ2, ಪ್ರಸಿದ್ಧ ಕೃಷ್ಣ 49ಕ್ಕೆ3, ಶ್ರೇಯಸ್ ಗೋಪಾಲ್ 43ಕ್ಕೆ3)

ಕರ್ನಾಟಕ: 27.5 ಓವರ್ಗಳಲ್ಲಿ 5ಕ್ಕೆ252 (ದೇವದತ್ತ ಪಡಿಕ್ಕಲ್ ಔಟಾಗದೇ 120, ಮಯಂಕ್ ಅಗರವಾಲ್ 53, ಶ್ರೇಯಸ್ ಗೋಪಾಲ್ 33, ವಿದ್ಯಾಧರ್ ಪಾಟೀಲ ಔಟಾಗದೇ 14, ಅನ್ಮೋಲ್ಜೀತ್ ಸಿಂಗ್ 40ಕ್ಕೆ3)

ಫಲಿತಾಂಶ: ಕರ್ನಾಟಕ ತಂಡಕ್ಕೆ 5 ವಿಕೆಟ್ ಜಯ.

ಕ್ವಾರ್ಟರ್ಫೈನಲ್ (ಫೆ 6ರಿಂದ 10)

ಬಂಗಾಳ vs ವಿದರ್ಭ

ಮಧ್ಯಪ್ರದೇಶ–ಜಮ್ಮು vs ಕಾಶ್ಮೀರ

ಆಂಧ್ರ vs ಉತ್ತರಾಖಂಡ

ಮುಂಬೈ vs ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.