ಅಹಮದಾಬಾದ್: ಅಧಿಕಾರಯುತ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಗುರುವಾರ 9 ವಿಕೆಟ್ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸದೆಬಡಿಯಿತು. ಸತತ ಎರಡನೇ ಗೆಲುವಿನಿಂದ ಹರಿಣಗಳ ಪಡೆ ಸೆಮಿಫೈನಲ್ ಸ್ಥಾನವನ್ನು ಹೆಚ್ಚುಕಮ್ಮಿ ಖಚಿಪಡಿಸಿಕೊಂಡಿತು.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ ನಂತರ, ಬ್ಯಾಟರ್ಗಳು ವಿಂಡೀಸ್ ಬೌಲರ್ಗಳನ್ನು ಮನಸಾರೆ ದಂಡಿಸಿದರು. ಟೂರ್ನಿಯಲ್ಲಿ ಸತತ ಆರನೇ ಗೆಲುವನ್ನು ದಾಖಲಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್ ಗೆಲುವಿನ ಓಟಕ್ಕೂ ತಡೆಬಿತ್ತು. ಅದರ ನೆಟ್ ರನ್ ರೇಟ್ 5.350 ರಿಂದ 1.791ಕ್ಕೆ ಇಳಿಯಿತು.

ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ್ದ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಈ ಪಂದ್ಯದಲ್ಲಿ ಪರದಾಡಿದರು. ಕೊನೆಯಲ್ಲಿ ರೊಮಾರಿಯೊ ಶೆಫರ್ಡ್ (ಔಟಾಗದೇ 52) ಮತ್ತು ಜೇಸನ್ ಹೋಲ್ಡರ್ (49) ಅವರ ಆಟದಿಂದಷ್ಟೇ 8 ವಿಕೆಟ್ಗೆ 176 ರನ್ಗಳ ಗೌರವದ ಮೊತ್ತ ಗಳಿಸಲು ಸಾಧ್ಯವಾಯಿತು. ಆದರೆ ಈ ಮೊತ್ತ ಲೆಕ್ಕಕ್ಕೆ ಇಲ್ಲದಂತೆ ಆಡಿದ ಹರಿಣಗಳ ಪಡೆಯ ನಾಯಕ ಏಡನ್ ಮರ್ಕರಂ (ಔಟಾಗದೇ 82), ಕ್ವಿಂಟನ್ ಡಿಕಾಕ್ (47, 24ಎ, 4x4, 6x4) ಮತ್ತು ರಿಯಾನ್ ರಿಕೆಲ್ಟನ್ (ಔಟಾಗದೇ 45) ಕೇವಲ 16.1 ಓವರುಗಳಲ್ಲಿ ತಂಡವನ್ನು (1 ವಿಕೆಟ್ಗೆ 177 ರನ್) ಗೆಲುವಿನ ದಡ ಸೇರಿಸಿದರು.

ಪವರ್ ಪ್ಲೇ ಅವಧಿಯಲ್ಲೇ 69 ರನ್ ಬಾರಿಸಿದ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡವನ್ನು ಅಧೀರಗೊಳಿಸಿತು. ಮರ್ಕರಂ ಮತ್ತು ಕ್ವಿಂಟನ್ ಮೊದಲ ವಿಕೆಟ್ಗೆ ಕೇವಲ 7.5 ಓವರುಗಳಲ್ಲಿ 95 ರನ್ ಸೇರಿಸಿದರು. ಈ ಅವಧಿಯಲ್ಲಿ 16 ಬೌಂಡರಿ, ಆರು ಸಿಕ್ಸರ್ಗಳು ಹರಿದುಬಂದವು.

ಮರ್ಕರಂ ಮತ್ತು ರಿಕೆಲ್ಟನ್ ಮುರಿಯದ ಎರಡನೇ ವಿಕೆಟ್ಗೆ 82 ರನ್ ಸೇರಿಸಿದರು. 46 ಎಸೆತಗಳ ಇನಿಂಗ್ಸ್ನಲ್ಲಿ ಮರ್ಕರಂ ಏಳು ಸಿಕ್ಸರ್, ನಾಲ್ಕು ಬೌಂಡರಿಗಳನ್ನು ಬಾರಿಸಿದರು. ರಿಕೆಲ್ಟನ್ 28 ಎಸೆತಗಳ ಇನಿಂಗ್ಸ್ನಲ್ಲಿ 4 ಬೌಂಡರಿ, ಎರಡು ಸಿಕ್ಸರ್ಗಳನ್ನು ಬಾರಿಸಿದರು.

ಇದಕ್ಕೆ ಮೊದಲು, ಕಗಿಸೊ ರಬಾಡ (22ಕ್ಕೆ2) ಮತ್ತು ಲುಂಗಿ ಎನ್ಗಿಡಿ (30ಕ್ಕೆ3) ಅವರ ವೇಗದ ದಾಳಿಗೆ ವೆಸ್ಟ್ ಇಂಡೀಸ್ ಕುಸಿಯಿತು. ಇವರಿಬ್ಬರು ಬೌನ್ಸ್ ಮತ್ತು ಲೆಂತ್ಗಳಿಂದ ಬ್ಯಾಟರ್ಗಳನ್ನು ಗಲಿಬಿಲಿಗೊಳಿಸಿದರು. ಒಂದು ಹಂತದಲ್ಲಿ ಕೆರೀಬಿಯನ್ ತಂಡ 11ನೇ ಓವರಿನಲ್ಲಿ 83 ರನ್ನಿಗೆ 7 ವಿಕೆಟ್ಗಳನ್ನು ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು.

ಆದರೆ ಹೋಲ್ಡರ್ ಮತ್ತು ಶೆಫರ್ಡ್ ಅವರು ಎಂಟನೇ ವಿಕೆಟ್ಗೆ ದಾಖಲೆಯ 89 ರನ್ (50 ಎಸೆತಗಳಲ್ಲಿ) ಸೇರಿಸಿದ್ದರಿಂದ, ಎದುರಾಳಿಯನ್ನು ಅಲ್ಪಮೊತ್ತಕ್ಕೆ ಉರುಳಿಸುವ ದಕ್ಷಿಣ ಆಫ್ರಿಕಾದ ಲೆಕ್ಕಾಚಾರ ಈಡೇರಲಿಲ್ಲ. ಹೋಲ್ಡರ್ ಅಂತಿಮ ಓವರಿನಲ್ಲಿ ರನ್ಔಟ್ ಆದರು.

ಸಂಕ್ಷಿಪ್ತ ಸ್ಕೋರು:

ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 8 ವಿಕೆಟ್ಗೆ 176 (ಜೇಸನ್ ಹೋಲ್ಡರ್ 49, ರೊಮಾರಿಯೊ ಶೆಫರ್ಡ್ ಔಟಾಗದೇ 52; ಕಗಿಸೊ ರಬಾಡ 22ಕ್ಕೆ2, ಲುಂಗಿ ಎನ್ಗಿಡಿ 30ಕ್ಕೆ3, ಕಾರ್ಬಿನ್ ಬಾಷ್ 31ಕ್ಕೆ2); ದಕ್ಷಿಣ ಆಫ್ರಿಕಾ: 16.1 ಓವರುಗಳಲ್ಲಿ 1 ವಿಕೆಟ್ಗೆ 177 (ಏಡನ್ ಮರ್ಕರಂ ಔಟಾಗದೇ 82, ಕ್ವಿಂಟನ್ ಡಿಕಾಕ್ 47, ರಿಯಾನ್ ರಿಕೆಲ್ಟನ್ ಔಟಾಗದೇ 45). ಪಂದ್ಯದ ಆಟಗಾರ: ಏಡನ್ ಮರ್ಕರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.