ಅಹಮದಾಬಾದ್: ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಟ್ರಾವಿಸ್ ಹೆಡ್ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತದ ಎದುರು 6 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಮೂರಂಕಿ ಮೊತ್ತ ಗಳಿಸುವ ಮೂಲಕ ಟ್ರಾವಿಸ್ ಹೆಡ್ ಅವರು ದಿಗ್ಗಜ ಬ್ಯಾಟರ್ಗಳ ಸಾಲಿಗೆ ಸೇರಿದರು. 120 ಎಸೆತಗಳನ್ನು ಎದುರಿಸಿದ ಹೆಡ್, 15 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 137 ರನ್ ಚಚ್ಚಿ, ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಇದುವರೆಗೆ ಒಟ್ಟು 7 ಬ್ಯಾಟರ್ಗಳು ಶತಕ ಸಿಡಿಸಿದ್ದಾರೆ. 1975ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಫೈನಲ್ನಲ್ಲಿ ವೆಸ್ಟ್ ಇಂಡೀಸ್ನ ಕ್ಲೈವ್ ಲಾಯ್ಡ್ (102 ರನ್) ಶತಕ ಸಿಡಿಸಿದ್ದರು. ಎರಡನೇ ವಿಶ್ವಕಪ್ ಫೈನಲ್ನಲ್ಲೂ ಅದೇ ದೇಶದ ವಿವಿಯನ್ ರಿಚರ್ಡ್ಸನ್ (138 ರನ್) ಮೂರಂಕಿ ದಾಟಿದ್ದರು.
ಬಳಿಕ ಶ್ರೀಲಂಕಾದ ಅರವಿಂದ ಡಿ ಸಿಲ್ವಾ (107 ರನ್) 1996ರಲ್ಲಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (140 ರನ್) ಹಾಗೂ ಆ್ಯಡಂ ಗಿಲ್ಕ್ರಿಸ್ಟ್ (149 ರನ್) ಕ್ರಮವಾಗಿ 2003, 2007ರಲ್ಲಿ, ಶ್ರೀಲಂಕಾದ ಮಹೇಲ ಜಯವರ್ಧನೆ (103 ರನ್) 2011ರಲ್ಲಿ ಶತಕ ಸಿಡಿಸಿದ್ದರು.