‘ಜೂನ್ 6ರಂದು ಮಗಳನ್ನು ಖಾಸಗಿ ಶಾಲೆಗೆ ದಾಖಲು ಮಾಡಿದ್ದೆವು. 10 ದಿನ ಶಾಲೆಗೆ ತೆರಳಿದ್ದ ಪುತ್ರಿ ನಂತರ ಶಾಲೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದಳು. ಆಕೆಯನ್ನು ವಿಚಾರಿಸಿದಾಗ, ಖಾಸಗಿ ಅಂಗಗಳಲ್ಲಿ ನೋವು ಆಗಿರುವ ಬಗ್ಗೆ ತಿಳಿಸಿದ್ದಳು. ‘ಮ್ಯಾಮ್’ ಖಾಸಗಿ ಅಂಗಗಳನ್ನು ಸ್ಪರ್ಶಿಸಿರುವ ಬಗ್ಗೆಯೂ ಮಾಹಿತಿ ನೀಡಿದ್ದಳು. ನಂತರ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು’ ಎಂದು ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.