ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಷಾಢ ಏಕಾದಶಿಗೆ ಬೀದರ್‌–ಪಂಢರಾಪುರ ನಡುವೆ ಎರಡು ವಿಶೇಷ ರೈಲು

Published : 26 ಜೂನ್ 2023, 14:01 IST
Last Updated : 26 ಜೂನ್ 2023, 14:01 IST
ಫಾಲೋ ಮಾಡಿ
Comments

ಬೀದರ್‌: ಆಷಾಢ ಏಕಾದಶಿ ಅಂಗವಾಗಿ ಬೀದರ್‌ ಹಾಗೂ ಮಹಾರಾಷ್ಟ್ರದ ಪಂಢರಾಪುರದ ನಡುವೆ ಭಕ್ತರ ಅನುಕೂಲಕ್ಕಾಗಿ ಎರಡು ವಿಶೇಷ ರೈಲುಗಳನ್ನು ಬಿಡಲಾಗಿದ್ದು, ಭಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಮೊದಲ ರೈಲು (ಗಾಡಿ ಸಂಖ್ಯೆ: 07505) ಮಂಗಳವಾರ (ಜೂ.27) ಬೆಳಿಗ್ಗೆ 11ಕ್ಕೆ ಅಕೋಲಾದಿಂದ ಹೊರಟು ಹಿಂಗೋಳಿ, ಬಾಸಮತ, ಪರಭಣಿ, ಪರಳಿ, ಭಾಲ್ಕಿ ಮೂಲಕ ರಾತ್ರಿ 10.5ಕ್ಕೆ ಬೀದರ್‌ ತಲುಪಲಿದೆ. ನಂತರ ಜಹೀರಾಬಾದ್, ವಿಕಾರಾಬಾದ್‌, ಸೇಡಂ, ಚಿತ್ತಾಪುರ, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಮರುದಿನ (ಜೂ.28) ಬೆಳಿಗ್ಗೆ 9.20ಕ್ಕೆ ಪಂಢರಾಪುರ ತಲುಪಲಿದೆ. ಅದೇ ರೈಲು (ಗಾಡಿ ಸಂಖ್ಯೆ: 07506) ಜೂ. 28ರಂದು ರಾತ್ರಿ 9.50ಕ್ಕೆ ಪಂಢರಾಪುರದಿಂದ ಹೊರಟು ಬಂದ ಮಾರ್ಗವಾಗಿ ಮರುದಿನ (ಜೂ. 29) ಬೆಳಿಗ್ಗೆ 9.33ಕ್ಕೆ ಬೀದರ್‌, 10.05ಕ್ಕೆ ಭಾಲ್ಕಿ ತಲುಪಲಿದೆ. ನಂತರ ಅಲ್ಲಿಂದ ಹೊರಟು ಸಂಜೆ 7.45ಕ್ಕೆ ಅಕೋಲಾ ತಲುಪಲಿದೆ ಎಂದು ತಿಳಿಸಿದ್ದಾರೆ.

ಎರಡನೆ ವಿಶೇಷ ರೈಲು (ಗಾಡಿ ಸಂಖ್ಯೆ: 07501) ಜೂ. 28ರಂದು ಬೆಳಿಗ್ಗೆ 11ಕ್ಕೆ ಅದಿಲಾಬಾದ್‌ ನಿಂದ ಹೊರಟು ನಾಂದೇಡ, ಪರಳಿ ವೈಜಿನಾಥ, ಉದಗೀರ ಮೂಲಕ ಭಾಲ್ಕಿಗೆ ರಾತ್ರಿ 9.30, ರಾತ್ರಿ 10.05ಕ್ಕೆ ಬೀದರ್‌ ತಲುಪಲಿದೆ. ಅಲ್ಲಿಂದ ಸೇಡಂ, ಚಿತ್ತಾಪುರ, ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಮರುದಿನ (ಜೂ. 29) ಬೆಳಿಗ್ಗೆ 9.20ಕ್ಕೆ ಪಂಢರಾಪುರ ತಲುಪಲಿದೆ. ಅದೇ ದಿನ (ಜೂ.29) (ಗಾಡಿ ಸಂಖ್ಯೆ: 07502) ರೈಲು ರಾತ್ರಿ 9.50ಕ್ಕೆ ಪಂಢರಾಪುರದಿಂದ ಹೊರಟು, ಬಂದ ಮಾರ್ಗವಾಗಿ ಮರುದಿನ (ಜೂ.30) ಬೆಳಿಗ್ಗೆ 9.30ಕ್ಕೆ ಬೀದರ್‌, 10.05ಕ್ಕೆ ಭಾಲ್ಕಿ, ರಾತ್ರಿ 8.45ಕ್ಕೆ ಅದಿಲಾಬಾದ್‌ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT