ಹೊಳೆಹೊನ್ನೂರು: ಪಟ್ಟಣ ಸಮೀಪದ ಹಳೆ ಜಂಬರಗಟ್ಟ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಪಟ್ಟಣದ ಉಪ್ಪಾರ ಬೀದಿ ನಿವಾಸಿ ಎಚ್.ಎನ್.ಶರತ್ (26) ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಜಂಬರಗಟ್ಟ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರಬಾಗಿಲು ಕಾಮಗಾರಿ ನಡೆಯುತ್ತಿದೆ. ಅಲ್ಲಿ ವಿಗ್ರಹ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿದ್ದು, ತೀವ್ರ ಅಸ್ವಸ್ಥನಾಗಿದ್ದ ಶರತ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶರತ್ ಅವರಿಗೆ ತಂದೆ, ತಾಯಿ ಹಾಗೂ ಸಹೋದರ ಇದ್ದಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಶರತ್ ಅವರು ಆಧಾರ ಆಗಿದ್ದರು.