ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls India LIVE: ಮೂರನೇ ಹಂತದ ಮತದಾನ ಮುಕ್ತಾಯ

Published 7 ಮೇ 2024, 2:40 IST
Last Updated 7 ಮೇ 2024, 15:56 IST
ಅಕ್ಷರ ಗಾತ್ರ
02:4007 May 2024

ದೇಶದಾದ್ಯಂತ 3ನೇ ಮತ್ತು ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದು, ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.120 ಮಹಿಳೆಯರು ಸೇರಿದಂತೆ 1,300ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ) ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುನಾ) ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ. 

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್‌ ಸಿಂಗ್‌ ಚೌಹಾನ್ ಮತ್ತು ದಿಗ್ವಿಜಯ್‌ ಸಿಂಗ್ ಅವರು ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದಾರೆ. 

ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

02:4907 May 2024

ಮತದಾನದ ಬಳಿಕ ಸ್ಥಳೀಯರ ಜೊತೆ ಮೋದಿ ಮಾತುಕತೆ

03:2407 May 2024

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ

04:3107 May 2024

ಬಾರಾಮತಿಯಲ್ಲಿ ಎನ್‌ಸಿಪಿ ನಾಯಲಿ ಸುಪ್ರಿಯಾ ಸುಳೆ ಮತದಾನ

04:3107 May 2024

ಬೆಳಿಗ್ಗೆ 9 ಗಂಟೆಗೆ ಹೊತ್ತಿಗೆ ಶೇಕಡ 10.57ರಷ್ಟು ಮತದಾನ

ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ

ಅಹಮದಾಬಾದ್‌ನಲ್ಲಿ ಪತ್ನಿ ಸಮೇತರಾಗಿ ಆಗಮಿಸಿ ಮತದಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಧ್ಯಪ್ರದೇಶ: ಜಾನಪದ ಹಾಡುಗಳನ್ನು ಹಾಡುತ್ತಾ ಮತಕೇಂದ್ರಕ್ಕೆ ಬಂದ ಮಹಿಳೆಯರು

ನಟಿ ಜೆನಿಲಿಯಾ ಮತ್ತು ರಿತೇಶ್ ದೇಶ್‌ಮುಖ್ ಮತದಾನ

06:3807 May 2024

ಬೆಳಿಗ್ಗೆ 11ರ ಹೊತ್ತಿಗೆ 25.41 ರಷ್ಟು ಮತದಾನ

07:0207 May 2024

ಉದ್ಯಮಿ ಗೌತಮ್ ಅದಾನಿ ಮತದಾನ

08:0907 May 2024

ಗುಜರಾತ್‌ನ ನಾಡಿಯಾಡ್‌ನಲ್ಲಿ ಕಾಲಿನ ಮೂಲಕ ಮತದಾನ ಮಾಡಿದ ವ್ಯಕ್ತಿ

09:3207 May 2024

ದೇಶದಾದ್ಯಂತ ಮೂರನೇ ಹಂತದ ಮತದಾನ ಬಹುತೇಕ ಮುಕ್ತಾಯವಾಗಿದೆ. ಬೆಳಗ್ಗ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆಯಿತು.

ಮೀಸಲಾತಿ ಸಂಬಂಧ BJP ಹಂಚಿಕೊಂಡಿರುವ ವಿಡಿಯೊ ತೆಗೆದುಹಾಕಲು ‘ಎಕ್ಸ್‌’ಗೆ EC ಸೂಚನೆ

ದೇಶದಾದ್ಯಂತ ಮಧ್ಯಾಹ್ನ 3 ಗಂಟೆವರೆಗೂ ಶೇ 50ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಮಹಾರಾಷ್ಟ್ರದಲ್ಲಿ ಶೇ 42.63 ರಷ್ಟು ಕಡಿಮೆ ಮತದಾನವಾಗಿದೆ.  ಪಶ್ಚಿಮ ಬಂಗಾಳದಲ್ಲಿ ಶೇ 63.11 ರಷ್ಟು ಹೆಚ್ಚು ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸಾಂ ಕಾಮರೂಪದಲ್ಲಿ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಅವರು ತಮ್ಮ ಕುಟುಂಬದವರ ಜೊತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

ಲೋಕಸಭೆ ಚುನಾವಣೆ ನಡುವೆಯೇ ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕಿ ರಾಧಿಕಾ ಖೇರಾ