ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ

Published 8 ಮೇ 2024, 10:45 IST
Last Updated 8 ಮೇ 2024, 11:33 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಅವರು ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಟ್ರೆಂಡ್‌ನಂತೆ ತೋರುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, ‘ಸಮಯ ಬದಲಾಗುತ್ತದೆ, ಸ್ನೇಹಿತರು ದೀರ್ಘ ಕಾಲ ಇರುವುದಿಲ್ಲ. ಮೂರು ಹಂತಗಳ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಸ್ನೇಹಿತರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಧಾನಿ ಕುರ್ಚಿ ಅಲುಗಾಡುತ್ತಿದೆ ಎನ್ನುವುದು ಇದರಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ’ ಎಂದಿದ್ದಾರೆ.

ತೆಲಂಗಾಣದಲ್ಲಿ ಪ್ರಚಾರದ ವೇಳೆ ಮೋದಿಯವರು, ‘ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು ಏಕಾಏಕಿ ಅಂಬಾನಿ–ಅದಾನಿಯ ವಿಷಯದ ಬಗ್ಗೆ ಟೀಕಿಸುವುದನ್ನು ನಿಲ್ಲಿಸಿದೆ. ತೆಲಂಗಾಣದ ಮಣ್ಣಿನಲ್ಲಿ ನಿಂತು ಕೇಳುತ್ತೇನೆ, ಕಾಂಗ್ರೆಸ್‌ಗೆ ಎಷ್ಟು ಹಣ ತಲುಪಿದೆ? ಯಾವ ಒಪ್ಪಂದ ಮಾಡಿಕೊಂಡಿದೆ? ಅಂಬಾನಿ–ಅದಾನಿ ಬಗ್ಗೆ ಟೀಕಿಸುವುದನ್ನು ರಾತ್ರಿ ಕಳೆಯುವುದರೊಳಗಾಗಿ ನಿಲ್ಲಿಸಿದ್ದು ಏಕೆ ಎನ್ನುವುದನ್ನು ಜನರಿಗೆ ಹೇಳಬೇಕು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT