ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲವ್‌ಬರ್ಡ್ಸ್‌’ನಲ್ಲಿ ಮತ್ತೆ ಒಂದಾದ ಡಾರ್ಲಿಂಗ್‌ ಕೃಷ್ಣ–ಮಿಲನ ನಾಗರಾಜ್‌!

Last Updated 12 ಜನವರಿ 2023, 19:30 IST
ಅಕ್ಷರ ಗಾತ್ರ

‘ಲವ್‌ ಮಾಕ್ಟೇಲ್‌’ ಸಿನಿಮಾ ಬಳಿಕ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನ ನಾಗರಾಜ್‌ ಜೋಡಿಯು ‘ಲವ್‌ ಬರ್ಡ್ಸ್‌’ ಆಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರದಲ್ಲಿನ ಮಿಲನ ಅವರ ಪಾತ್ರ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಚಿತ್ರತಂಡವು ಪೋಸ್ಟರ್‌ ಮೂಲಕ ಉತ್ತರಿಸಿದೆ.

2020ರಲ್ಲಿ ತೆರೆಕಂಡ ‘ಲವ್‌ ಮಾಕ್ಟೇಲ್‌’ ಸಿನಿಮಾ ಕೃಷ್ಣ ಹಾಗೂ ಮಿಲನ(ಕ್ರಿಸ್ಮಿ) ಜೋಡಿಯ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ. ರೀಲ್‌ನಲ್ಲಿ ನಿಧಿ–ಆದಿ ಜೋಡಿಯನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈ ಜೋಡಿ ಮತ್ತೆ ತೆರೆ ಮೇಲೆ ಯಾವಾಗ ಬರಲಿದೆ ಎನ್ನುವ ಕುತೂಹಲದಲ್ಲಿದ್ದರು. ನಿರ್ದೇಶಕ ಪಿ.ಸಿ.ಶೇಖರ್‌ ತಮ್ಮ ಹೊಸ ಪ್ರಾಜೆಕ್ಟ್‌ ಘೋಷಿಸಿದಾಗ ಇದಕ್ಕೆ ಉತ್ತರ ದೊರಕಿತ್ತು.

‘ಲವ್‌ ಬರ್ಡ್ಸ್‌’ ಸಿನಿಮಾದಲ್ಲಿ ಕ್ರಿಸ್ಮಿ ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲಿದೆ ಎನ್ನುವುದು ಖಚಿತವಾಗಿತ್ತು. ಸದ್ದಿಲ್ಲದೇ ಚಿತ್ರತಂಡವು ಚಿತ್ರದ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ ಚಿತ್ರವಿದೆ. ಈ ವರ್ಷವೇ ಸಿನಿಮಾ ತೆರೆಕಾಣಲಿದೆ.

ಈ ಸಿನಿಮಾದಲ್ಲಿ ಮಿಲನ ಫ್ಯಾಷನ್‌ ಡಿಸೈನರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ಚಿತ್ರಕಲಾವಿದೆ ಆಗಿಯೂ ಮಿಲನ ಕಾಣಿಸಿಕೊಂಡಿದ್ದಾರೆ. ಮದುವೆಯ ನಂತರದ ಗಂಡ–ಹೆಂಡತಿಯ ಸಂಬಂಧದ ಕಥಾಹಂದರವನ್ನು ಈ ಚಿತ್ರವು ಹೊಂದಿದೆ. ‘ಲವ್‌ ಮಾಕ್ಟೇರ್‌’ ಸರಣಿ ಬಳಿಕ ಮಿಲನ ಹಾಗೂ ಡಾರ್ಲಿಂಗ್‌ ಕೃಷ್ಣ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಇದಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಕೃಷ್ಣ ಅವರ ‘ಮಿ.ಬ್ಯಾಚುಲರ್‌’ ಚಿತ್ರದಲ್ಲೂ ಮಿಲನ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT