ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನವಮಿ ಮೆರವಣಿಗೆ ವೇಳೆ ಹೂಗ್ಲಿಯಲ್ಲಿ ಘರ್ಷಣೆ: ಬಿಜೆಪಿ ಶಾಸಕ, ಪೊಲೀಸರಿಗೆ ಗಾಯ

Last Updated 3 ಏಪ್ರಿಲ್ 2023, 4:28 IST
ಅಕ್ಷರ ಗಾತ್ರ

ಹೂಗ್ಲಿ: ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿಯ ಮೆರವಣಿಗೆ ವೇಳೆ ಕಳೆದ ವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಬೆನ್ನಿಗೇ, ಭಾನುವಾರ ಹೂಗ್ಲಿ ಜಿಲ್ಲೆಯ ರಿಶ್ರಾದಲ್ಲೂ ಅದೇ ರೀತಿಯ ಘಟನೆ ನಡೆದಿದೆ. ಬಿಜೆಪಿ ನೇತೃತ್ವದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆ ವೇಳೆ ಕಲ್ಲೂ ತೂರಾಟ ನಡೆದು ಹಿಂಚಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಬಿಜೆಪಿ ಶಾಸಕ, ಪೊಲೀಸರು ಗಾಯಗೊಂಡಿದ್ದಾರೆ.

ಶೋಭಾಯಾತ್ರೆಯಲ್ಲಿ ಬಿಜೆಪಿ ಉಪಾಧ್ಯಕ್ಷ, ಸಂಸದ ದಿಲೀಪ್‌ ಘೋಷ್‌ ಸೇರಿದಂತೆ ಬಿಜೆಪಿಯ ಹಲವು ನಾಯಕರು ಭಾಗವಹಿಸಿದ್ದರು.

ಹಿಂಸಾಚಾರದಲ್ಲಿ ಖಾನಕುಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿಮನ್ ಘೋಷ್, ರಿಶ್ರಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಪಿಯಾಲಿ ಬಿಸ್ವಾಸ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೆರವಣಿಗೆಯು ಭಾನುವಾರ ಸಂಜೆ ರಿಶ್ರಾದಲ್ಲಿನ ಜನನಿಬಿಡ ಮಾರುಕಟ್ಟೆಯನ್ನು ತಲುಪಿತ್ತು. ಈ ವೇಳೆ ಘರ್ಷಣೆವುಂಟಾಯಿತು. ನಂತರ ಮೆರವಣಿಗೆಯ ಮೇಲೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಸಿಡಿಸಿದ್ದಾರೆ.

ಶಾಸಕ ಬಿಮನ್ ಘೋಷ್ ಅವರ ತಲೆಗೆ ಗಾಯಗಳಾಗಿದ್ದು, ಅವರನ್ನು ಉತ್ತರಪಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಶ್ರಾದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಚಂದರನಗರ ನಗರ ಪೊಲೀಸ್ ಆಯುಕ್ತ ಅಮಿತ್ ಪಿ ಜವಳಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT